ಆಸ್ಟ್ರೇಲಿಯಾದಲ್ಲಿ ಇಲಿಗಳ ಮಳೆ, ಪ್ಲೇಗ್‌ ಭೀತಿ: ಭಾರತದ ಬಳಿ ನಿಷೇಧತ ವಿಷಕ್ಕೆ ಬೇಡಿಕೆ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಈಗ ಇಲಿಗಳ ಮಳೆಯಾಗುತ್ತಿದೆಯಂತೆ. ಹೊಲ, ಮನೆ, ಕಚೇರಿ, ರೆಸ್ಟೋರೆಂಟ್‌ ಎಲ್ಲೆಲ್ಲೂ ನೂರಾರು ಇಲಿಗಳು ಓಡಾಡುತ್ತಿದ್ದು ಅವುಗಳನ್ನು ಕೊಲ್ಲುವುದು ಹೇಗಪ್ಪಾ ಎಂದು ಅಲ್ಲಿನ ಆಡಳಿತ ತಲೆ ಮೇಲೆ ಕೈ ಹೊತ್ತು ಕುಳಿತಿದೆ.

ಸದ್ಯ ಆಸ್ಟ್ರೇಲಿಯಾದಲ್ಲಿ ಪ್ಲೇಗ್‌ನಂತರಹ ವಾತಾವರಣ ನಿರ್ಮಾಣವಾಗಿದ್ದು ಆಸ್ಟ್ರೇಲಿಯಾ ಸರ್ಕಾರವು 5ಸಾವಿರ ಲೀಟರ್‌ Bromadiolone ಎನ್ನುವ ಕಾರ್ಕೋಟಕ ವಿಷ ಕೊಡುವಂತೆ ಭಾರತದ ಬಳಿ ಬೇಡಿಕೆ ಇಟ್ಟಿದೆ. ವಿಶೇಷ ಎಂದರೆ ಈ ವಿಷವವನ್ನು ಆಸ್ಟ್ರೇಲಿಯಾದಲ್ಲಿ ಈವರೆಗೆ ನಿಷೇಧಿಸಲಾಗಿತ್ತು.

ಆಸ್ಟ್ರೇಲಿಯಾದ ಕೃಷಿ ಸಚಿವರಾದ ಅಡಮ್‌ ಮಾರ್ಷಲ್‌ ಅವರು ಇಲಿಗಳ ಹಾವಳಿಯ ಬಗ್ಗೆ ಭವಿಷ್ಯ ನುಡಿದಿದ್ದು, ಮುಂದಿನ ತಿಂಗಳ ಹೊತ್ತಿಗೆ ಇಲಿಗಳ ಸಂಖ್ಯೆ ಕಡಿಮೆಯಾಗದಿದ್ದರೆ ಆಸ್ಟ್ರೇಲಿಯಾದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ನೆಲ ಕಚ್ಚಲಿದೆ ಎಂದು ತಿಳಿಸಿದ್ದಾರೆ.

ಟೆರೇಸ್‌ಗಳು, ಗೋದಾಮುಗಳಲ್ಲಿ ಇಲಿಗಳ ಸಾಮ್ರಾಜ್ಯ:
ನ್ಯೂ ಸೌತ್‌ವೇಲ್ಸ್‌ನ ಗ್ರಾಮೀಣ ಪ್ರದೇಶಗಳಲ್ಲಿ ಇಲಿಗಳು ರೈತರು ಬೆಳೆದ ಬೆಳೆಗಳನ್ನಷ್ಟೇ ಮುಕ್ಕುತ್ತಿಲ್ಲ. ಬದಲಾಗಿ ಅವರ ಮನೆಗಳಲ್ಲಿರುವ ಗೋದಾಮುಗಳ ಮೇಲೂ ದಾಳಿ ಮಾಡಿ ತಿಂದು ಮುಗಿಸುತ್ತಿವೆ.

ರಾತ್ರಿ ನಾವು ಮಲಗಿದ್ದ ಸಮಯದಲ್ಲಿ ಸಾವಿರಾರು ಇಲಿಗಳು ಒಮ್ಮೆಗೆ ಚಿವ್‌ ಚಿವ್‌ ಎನ್ನುತ್ತಾ ಓಡಾಡುತ್ತಿರುತ್ತವೆ. ನಾವು ನೆಮ್ಮದಿಯಾಗಿ ಮಲಗಲೂ ಆಗುತ್ತಿಲ್ಲ. ನಮ್ಮ ಬೆಳೆಗಳು ಈಗ ಅಪಾಯದಲ್ಲಿವೆ ಎನ್ನುತ್ತಾರೆ ಅಲ್ಲಿನ ರೈತರು. ಆಸ್ಟ್ರೇಲಿಯಾದ ಗ್ರಾಮೀಣ ಪ್ರದೇಶಗಳಲ್ಲಿ ಇಲಿಗಳನ್ನು ಕೊಲ್ಲಲು ಕೊವರು ವಿಷ ಇಡುತ್ತಿದ್ದರೆ, ಇನ್ನೂ ಕೆಲವರು ಬಕೆಟ್‌ನಲ್ಲಿ ಅವನ್ನು ತುಂಬಿ ಎಸೆಯುತ್ತಿದ್ದಾರೆ.

ಈ ನಡುವೆ ಆಸ್ಟ್ರೇಲಿಯಾದ ಆಡಳಿತವ ಬೆಳೆಗಳಿಗೆ ಬಳಸುವ ಝಿಂಗ್‌ ಪಾಸ್ಪೇಟ್‌ಅನ್ನು ದ್ವಿಗುಣಗೊಳಿಸುವಂತೆ ಹೇಳಿದೆ.

ಪೂರ್ವ ಆಸ್ಟ್ರೇಲಿಯಾದ ಆಸ್ಪತ್ರೆಗಳು, ಹೋಟೆಲ್‌ಗಳಲ್ಲಿ ಇಲಿಯಿಂದ ಉಂಟಾದ ಸೋಂಕಿನ ಕೆಲವು ಪ್ರಕರಣಗಳು ಕಂಡುಬಂದಿವೆ. ನೂರಾರು ಇಲಿಗಳು ಮಾಳಿಗೆಯಿಂದ ಉದುರುತ್ತಿರುವ ವಿಡಿಯೋಗಳು ವೈರಲ್‌ ಆಗುತ್ತಿವೆ. ಇದನ್ನು ಇಲಿಗಳ ಮಳೆ ಎಂದೇ ಹೇಳಲಾಗುತ್ತಿದೆ.

ಇಲಿಗಳ ಹಾವಳಿ ಹೆಚ್ಚಾದ ಕಾರಣ ಆಸ್ಟ್ರೇಲಿಯಾ ಸರ್ಕಾರವು ರೈತರಿಗಾಗಿ 50 ಮಿಲಿಯನ್‌ ಡಾಲರ್‌ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿದೆ.

ಇಲಿಗಳ ಮಳೆಗೆ ಕಾರಣ ಏನು?
ಕಳೆದ ಐದು ದಶಕಗಳಲ್ಲಿ ಆಸ್ಟ್ರೇಲಿಯಾ ಭೀಕರ ಬರ ಕಂಡಿತ್ತು. ಕೆಲವು ವರ್ಷಗಳಿಂದ ಈ ದೇಶದಲ್ಲಿ ಭರಪೂರ ಮಳೆಯಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದ ಕಾರಣ ಇಲ್ಲಿನ ರೈತರು ತಮ್ಮ ಬೆಳೆಗಳನ್ನು ಹತ್ತು ಪಟ್ಟು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಇಲಿಗಳು ಕಾಣಸಿಕೊಂಡಿದ್ದು, ಭರ್ತಿ ಆಹಾರ ಸಿಗುತ್ತಿರುವ ಕಾರಣ ಅವುಗಳ ಸಂತಾನೋತ್ಪತ್ತಿ ಕ್ರಿಯೆಯೂ ಅಷ್ಟೇ ವೇಗವಾಗಿ ನಡೆಯುತ್ತಿದೆ. ಇಷ್ಟು ದಿನ ಮಳೆ ಇಲ್ಲದೆ ಬೆಳೆ ಬೆಳೆಯದ ರೈತರು ಖುಷಿಯಾಗಿ ಕೃಷಿ ಆರಂಭಿಸಿದ್ದರು, ಇಲಿಗಳ ಹಾವಳಿ ಹೆಚ್ಚಾಗಿರುವ ಕಾರಣ ಸ್ಥಳೀಯ ಆಡಳಿತವೇ ಬೆಳೆಯನ್ನು ಕಡಿಮೆ ಬೆಳೆಯುವಂತೆ ರೈತರಿಗೆ ಸೂಚನೆ ನೀಡಿದೆ. ಆಸ್ಟ್ರೇಲಿಯಾದ ಪೂರ್ವ ರಾಜ್ಯಗಳಲ್ಲೂ ಇದೇ ರೀತಿ ಇಲಿಗಳ ಮಳೆಯಾಗುತ್ತಿದ್ದು ಸರ್ಕಾರಕ್ಕೆ ಈಗ ಕೋವಿಡ್‌ ಸೋಂಕಿನ ವಿರುದ್ಧದ ಹೋರಾಟದ ಜೊತೆಗೆ ಇಲಿಗಳ ವಿರುದ್ಧವೂ ಹೋರಾಡಬೇಕಿದೆ.

× Chat with us