ಪ್ರೇಮಿಗಳ ದಿನಕ್ಕೆ ಮೇಘನಾರಾಜ್‌ ಕೊಟ್ರು ಬಂಪರ್‌ಗಿಫ್ಟ್‌; ಇಲ್ಲಿದೆ ವಿಡಿಯೋ

ಫೆ.14ರ ಪ್ರೇಮಿಗಳ ದಿನದಂದು ಕುತೂಹಲಕಾರಿ ಸಂಗತಿಯೊಂದನ್ನು ಹಂಚಿಕೊಂಡಿರುವ ಚಿರಂಜೀವಿ ಸರ್ಜಾರ ಪತ್ನಿ ಮೇಘನಾ ರಾಜ್‌ ಜೂನಿಯರ್‌ ಚಿರುವನ್ನು ಪರಿಚಯಿಸಿದ್ದಾರೆ.

ʻಒಂದು ಕುತೂಹಲಕಾರಿ ಸಂಗತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ, ಜೂನಿಯರ್ ಚಿರುವನ್ನು ನಿಮಗೆ ಪರಿಚಯಿಸುತ್ತೇನೆ ಎಂದು ಹೇಳಿದ್ದ ಮೇಘನಾರಾಜ್‌, ಈ ಕುರಿತು ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅದೀಗ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ಚಿರಂಜೀವಿ ಸರ್ಜಾ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ವಿಡಿಯೋ ತುಣುಕಿನಲ್ಲಿ ಮೇಘನಾ ರಾಜ್‌ ಹಾಗೂ ಚಿರಂಜೀವಿ ಸರ್ಜಾರ ಫೋಟೋಗಳೂ ಕೂಡ ಇವೆ.