ಮೈಸೂರು: ಊರಿಗೆ ಕಳುಹಿಸಲು ಪತಿ ಒಪ್ಪದಿದ್ದಕ್ಕೆ ಬೇಸರಗೊಂಡು ಪತ್ನಿ ನೇಣಿಗೆ ಶರಣು!

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾನಸಿನಗರದ ನಿವಾಸಿ ಬಾಲಾಜಿ ಅವರ ಪತ್ನಿ ವಿದ್ಯಾಲಕ್ಷ್ಮಿ ಅವರು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಇವರು ಕಳೆದ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.

ತಮಿಳುನಾಡಿನವರಾದ ಬಾಲಾಜಿ ಅವರು ತೆರಿಗೆ ಇಲಾಖೆಯ ಜಿಎಸ್‌ಟಿ ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಊರಿಗೆ ಹೋಗುವ ವಿಚಾರದಲ್ಲಿ ಮೂಡಿದ ವೈಮನಸ್ಸಿನಿಂದ ವಿದ್ಯಾಲಕ್ಷ್ಮೀ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us