ಮೈಸೂರು ಡಿಸಿ ವರ್ಗಾಯಿಸಿ… ಚಾ.ನಗರ ಜಿಲ್ಲಾಸ್ಪತ್ರೆ ಎದುರು ಏಕಾಂಗಿ ಪ್ರತಿಭಟನೆ

ಚಾಮರಾಜನಗರ: ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತಕ್ಕೆ ಮೈಸೂರಿನ ಡಿಸಿ ರೋಹಿಣಿ ಸಿಂಧೂರಿ ನೇರ ಕಾರಣ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ಶಾ. ಮುರುಳಿ ಮಂಗಳವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು‌.

ಜಿಲ್ಲಾ ಸರ್ಜನ್ ಕೊಠಡಿಯ ಮುಂಭಾಗದ ಮಲಗಿ ಆಕ್ರೋಶ ಹೊರಹಾಕಿದರು. ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಹಾಗೂ ತನಿಖಾಧಿಕಾರಿ ಶಿವಯೋಗಿ ಕಳಸದ್ ಅವರು ಮನವೊಲಿಸಿದರೂ ಪ್ರತಿಭಟನಾ ಸ್ಥಳದಿಂದ ಜಗ್ಗಲಿಲ್ಲ.

ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ಕೊಡಬೇಕು ಎಂದು ಶಾ.ಮುರಳಿ ಆಗ್ರಹಿಸಿ ನಂತರ ಪ್ರತಿಭಟನೆ ಕೈ ಬಿಟ್ಟರು.

× Chat with us