ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಹನೂರು: ಹುಣಸೇಹಣ್ಣು ಕೀಳಲು ಹೋಗಿ ವಿದ್ಯುತ್ ತಂತಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಮೊಳೆದೊಡ್ಡಿ ಗ್ರಾಮದ ವೀರ (27) ಮೃತಪಟ್ಟವರು.

ಕಾನ ಮೊಳೆದೊಡ್ಡಿ ಗ್ರಾಮದ ವೀರ ಎಂಬವರು ವ್ಯಕ್ತಿಯೊಬ್ಬರ ಜಮೀನಿನಲ್ಲಿ ಹುಣಸೇಹಣ್ಣು ಕೀಳಲು ಮರಕ್ಕೆ ಹತ್ತುತ್ತಿದ್ದಾಗ ಪಕ್ಕದಲ್ಲೇ ಹಾದುಹೋಗಿದ್ದ ೧೧ಕೆವಿ ವಿದ್ಯುತ್ ತಂತಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್, ಪೇದೆಗಳಾದ ಚಂದ್ರು, ರಾಮ್‌ಶೆಟ್ಟಿ, ಬಿಳಿಗೌಡ, ರಾಘವೇಂದ್ರ, ಸೆಸ್ಕ್ ಇಇ ರಂಗಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.

× Chat with us