ಕೋವಿಡ್‌ಗಿಂತ ಕ್ರೂರ… ಅಪ್ಪನ ಹೆಣ ಬೇಡ, ಅವರು ದುಡಿದ ಹಣ ಮಾತ್ರ ಬೇಕಂದ ಪುತ್ರ!!

ಮೈಸೂರು: ಕೋವಿಡ್‌ ಕಾಲಘಟ್ಟದಲ್ಲಿ ಮಾನವೀಯತೆ ಮರೆಯಾಗಿದ್ದು, ತಂದೆಯ ಶವ ಬೇಡ ಅವರ ಹಣ ಬೇಕು ಎಂದು ಮಗ ಹೇಳಿರುವ ಘಟನೆ ನಗರದಲ್ಲಿ ನಡೆದಿದೆ.

ಹೆಬ್ಬಾಳದ ಸೂರ್ಯ ಬೇಕರಿ ಬಳಿ ನಿವಾಸಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಅವರ ಶವವನ್ನು ಕುಟುಂಬಕ್ಕೆ ತಲುಪಿಸಲು ಮುಂದಾದಾಗ ಕರೆ ಸ್ವೀಕರಿಸಿದ ಪುತ್ರನು ನಮ್ಮ ತಂದೆಯ ಶವ ಬೇಡ ಎಂದು ಹೇಳಿದ್ದಾನೆ.

ನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಅವರು ತಂದೆ ಕೋವಿಡ್‌ನಿಂದ ಮೃತಪಟ್ಟಿರುವ ಬಗ್ಗೆ ಮಗನಿಗೆ ಫೋನ್ ಮೂಲಕ ವಿಷಯ ಮುಟ್ಟಿಸಿದ್ದಾರೆ. ಆದರೆ ಕೊರೊನಾದಿಂದ ಸಾವಿಗೀಡಾದ ತಂದೆಯ ಶವ ಪಡೆಯಲು ಒಪ್ಪದ ಮಗ, ‘ನೀವೇ ಅಂತ್ಯಕ್ರಿಯೆ ಮುಗಿಸಿ..’ ಎಂದಿದ್ದಾನೆ.

ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣವನ್ನು ತಂದು ಕೊಡಿ ಎಂದು ತಿಳಿಸಿದ್ದಾನಂತೆ. ಹೀಗಾಗಿ, ಬಂಧು-ಬಳಗ ಇದ್ದರೂ ಕೊರೊನಾ ಸೋಂಕಿತನ ಶವ ಅನಾಥವಾಗಿದೆ.

× Chat with us