ಮಹೇಂದ್ರ ಸಿಂಗ್‌ ಧೋನಿ ಹೊಸ ಲುಕ್‌… ಎಲ್ಲಿ, ಏನು ಎಂಬುದು ನಿಗೂಢ!

ಮುಂಬೈ: ಕ್ರಿಕೆಟ್‌ ಕ್ಷೇತ್ರ ಅಷ್ಟೇ ಅಲ್ಲ ತನ್ನ ಜೀವನದಲ್ಲೂ ವಿಶಿಷ್ಟ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್‌ ಧೋನಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ಅವರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಆಕರ್ಷಕ ಕೇಶ ವಿನ್ಯಾಸ, ವಿಶೇಷ ಉಡುಪುಗಳೊಂದಿಗೆ ಸ್ಟಾರ್‌ ಅಂತೆ ಕಾಣಿಸಿಕೊಳ್ಳುತ್ತಿದ್ದ ಧೋನಿ, ತಲೆಗೂದಲು ತೆಗಿಸಿ ಬೌದ್ಧ ಬಿಕ್ಕು ಅಥವಾ ಸಮರಕಲೆಗಳ ಗುರುವಿನಂತೆ ಉಡುಪು ಧರಿಸಿದಂತೆ ಕಾಣಿಸಿಕೊಂಡಿರುವ ಫೋಟೊವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೊಸ ಅವತಾರದ ಫೋಟೋ ಶೂಟ್​ ಎಲ್ಲಿ ನಡೆದಿರಬಹುದು ಎನ್ನುವ ಬಗ್ಗೆ ಕೂಡ ಮಾಹಿತಿಯಿಲ್ಲ. ಅವರ ಕೆಲ ಅಭಿಮಾನಿಗಳು ದಕ್ಷಿಣ ಭಾರತದಲ್ಲಿ ಶೂಟ್​ ಅಗಿದೆ ಎಂದು ಹೇಳುತ್ತಿದ್ದಾರೆ. ದಕ್ಷಿಣ ಭಾರತದ ಯಾವುದೋ ಒಂದು ಪ್ರಾಜೆಕ್ಟ್​ಗೆ ಧೋನಿ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಚೆನೈನ ದತ್ತು ಪುತ್ರ ಆ ಪ್ರಾಜೆಕ್ಟ್​ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ.

ಒಂದು ಮೂಲದ ಪ್ರಕಾರ ಈ ಫೋಟೋವನ್ನು ದಕ್ಷಿಣ ಬಾರತದ ಯಾವುದೋ ಯುದ್ಧಕಲೆಗಳ ತರಬೇತಿ ಶಿಬಿರದಲ್ಲಿ ಶೂಟ್​ ಮಾಡಲಾಗಿದೆ ಎನ್ನಲಾಗಿದೆ.

× Chat with us