ನವದೆಹಲಿ : ಏರ್ ಇಂಡಿಯಾದ ಪ್ರಖ್ಯಾತ ಲೋಗೋ ಆದ ಮಹಾರಾಜನಿಗೆ ವಿದಾಯ ಹೇಳಿದ ಟಾಟಾ ಮಾಲಕತ್ವದ ಏರ್ ಇಂಡಿಯಾ, ಗುರುವಾರ ತನ್ನ ನೂತನ ಲೋಗೋ ಬಿಡುಗಡೆ ಮಾಡಿದ್ದು, ಅದು ಅಪರಿಮಿತ ಸಾಧ್ಯತೆಗಳನ್ನು ಸೂಚಿಸುವಂತಿದೆ. ಈ ನೂತನ ಲೋಗೋ ಬಿಡುಗಡೆ ಮಾಡಲು 15 ತಿಂಗಳಿನಿಂದ ಏರ್ ಇಂಡಿಯಾ ಕೆಲಸ ಮಾಡಿದೆ. ಈ ಲೋಗೋವು ಅಶೋಕ ಚಕ್ರದಿಂದ ಪ್ರೇರಣೆಗೊಂಡಿದ್ದ ಹಳೆಯ ಕೆಂಪು ಹಂಸ ಹಾಗೂ ಕೇಸರಿ ಮುಳ್ಳುಗಳ ಲೋಗೋದ ಸ್ಥಾನವನ್ನು ಆಕ್ರಮಿಸಲಿದೆ.
ಏರ್ ಇಂಡಿಯಾದ ನೂತನ ಲೋಗೋ ಚಿಹ್ನೆಯು ‘ದಿ ವಿಸ್ತಾ’ ಎಂದಿದ್ದು, ಆಧುನಿಕ ವಿನ್ಯಾಸ ಒಳಗೊಂಡಿರುವ ಸುವರ್ಣ, ಕೆಂಪು ಹಾಗೂ ನೇರಳೆ ಬಣ್ಣಗಳನ್ನು ಹೊಂದಿದೆ.
ನೂತನ ಲೋಗೋ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ ಕಂಪನಿಯು, “ಈ ವಿನ್ಯಾಸವು ಉತ್ಕೃಷ್ಟ ಸುವರ್ಣ ಕಿಟಕಿ ಚೌಕಟ್ಟಿನಿಂದ ಪ್ರೇರಿತಗೊಂಡಿದ್ದು, ಅಪರಿಮಿತ ಸಾಧ್ಯತೆಗಳು, ಪ್ರಗತಿಪರತೆ ಹಾಗೂ ಭವಿಷ್ಯದೆಡೆಗಿನ ಏರ್ ಲೈನ್ಸ್ ನ ಧೈರ್ಯ, ವಿಶ್ವಾಸದ ದೃಷ್ಟಿಕೋನವನ್ನು ಸೂಚಿಸುತ್ತದೆ” ಎಂದು ಹೇಳಿದೆ.
ನೂತನ ಲೋಗೋವು ಕಲಾತ್ಮಕ ಹಾಗೂ ವಿಶಿಷ್ಟ ಭಾರತೀಯ ಕಿಟಕಿಯ ವಿನ್ಯಾಸದಿಂದ ಪ್ರೇರಣೆಗೊಂಡಿದ್ದು, ಈ ವಿನ್ಯಾಸವನ್ನು ಏರ್ ಇಂಡಿಯಾ ಚಾರಿತ್ರಿಕವಾಗಿ ಬಳಸುತ್ತಾ ಬರುತ್ತಿದೆ. ಈ ವಿನ್ಯಾಸವನ್ನು ಏರ್ ಇಂಡಿಯಾ ಕಂಪನಿಯು “ಅವಕಾಶಗಳ ಕಿಟಕಿ” ಎಂದು ಭಾವಿಸಿದೆ.
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್ನಾಥ್ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…