ಕೊರೊನಾ ಗೆದ್ದ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ ಸ್ವಾಮೀಜಿ

ಚಾಮರಾಜನಗರ: ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ ಸ್ವಾಮೀಜಿ ಗುಣಮುಖರಾಗಿದ್ದಾರೆ.

ಹಿರಿಯಶ್ರೀ ಗುರುಸ್ವಾಮಿ (65) ಅವರು ಹೃದಯ ಸಂಬಂಧಿ ಸಮಸ್ಯೆ, ಕಿಡ್ನಿ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದರು. ಪರೀಕ್ಷೆ ನಡೆಸಿದಾಗ ಕೋವಿಡ್‌ ಇರುವುದು ದೃಢಪಟ್ಟಿತ್ತು. ನಂತರ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಕೊರೊನಾ ಗೆದ್ದ ಸ್ವಾಮೀಜಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಸಿಗೆಯಿಂದ ಮೇಲೆದ್ದು ದಿನಕ್ಕೆ ಎರಡು ಬಾರಿ ಶಿವಪೂಜೆ, ಧ್ಯಾನದಲ್ಲಿ ತೊಡಗುತ್ತಿದ್ದಾರೆ.

× Chat with us