ಬಡವರ ಪಾಲಿನ ಧನ್ವಂತರಿ ಡಾ.ಶಂಕರೇಗೌಡರು

ಮಂಡ್ಯ ಜಿಲ್ಲೆಯ ಜನಪ್ರಿಯ ಚರ್ಮ ವೈದ್ಯರೂ, ಬಡವರ ಪಾಲಿನ ಧನ್ವಂತರಿಗಳೆಂದೇ ಖ್ಯಾತಿ ಗಳಿಸಿರುವ ಡಾ.ಎಸ್.ಸಿ. ಶಂಕರೇಗೌಡರು ಅಪರೂಪದ ವೈದ್ಯರಲ್ಲೊಬ್ಬರು. ಕಳೆದ ೩೮ ವರ್ಷಗಳಿಂದ ಅತ್ಯಂತ ಕಡಿಮೆ ಶುಲ್ಕ ಪಡೆದು ರೋಗಿಗಳಿಗೆ ಔಷಧೋಪಚಾರ ನೀಡುತ್ತಿರುವ ಒಬ್ಬ ಆದರ್ಶ ವ್ಯಕ್ತಿ. ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ‘೫ ರೂ.ಡಾಕ್ಟರ್’ ಎಂದೇ ಶಂಕರೇಗೌಡರ ಹೆಸರು ಪರಿಚಿತ. ಇವರ ಹುಟ್ಟೂರು ಮಂಡ್ಯ ತಾಲ್ಲೂಕಿನ ಶಿವಳ್ಳಿ ಗ್ರಾಮ. ಚನ್ನೇಗೌಡ-ದೊಡ್ಡಬೋರಮ್ಮ ದಂಪತಿಯ ಎರಡನೇ ಮಗನಾಗಿ ೧೯೫೫ರ ಸೆ.೬ರಂದು ಜನಿಸಿದರು.

ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪಿಯುಸಿ ತೇರ್ಗಡೆ ಯಾದ ನಂತರ, ವೈದ್ಯಕೀಯ ವ್ಯಾಸಂಗಕ್ಕಾಗಿ ೧೯೭೪ರಲ್ಲಿ ಮಣಿಪಾಲದ ಕಸ್ತೂರಿಬಾ ಮೆಡಿಕಲ್ ಕಾಲೇಜಿಗೆ ಸೇರಿದರು. ಅದೇ ಕಾಲೇಜಿನಲ್ಲಿ ೧೯೮೭ರಲ್ಲಿ ಡಿಎಡಿ ತೇರ್ಗಡೆಯಾದರು. ಇವರು ಸರ್ಕಾರಿ ಉದ್ಯೋಗಕ್ಕೆ ಆಸೆ ಪಡದೆ, ೧೯೮೨ರಲ್ಲಿ ಮಂಡ್ಯ ನಗರದ ಶ್ರೀ ಆದಿಚುಂಚನಗಿರಿ ಮಠದ ಕಟ್ಟಡದಲ್ಲಿ ‘ತಾರಾ ಕ್ಲಿನಿಕ್’ ಅನ್ನು ತೆರೆದು ಸ್ವಂತ ಪ್ರಾಕ್ಟೀಸ್ ಆರಂಭಿಸಿದರು. ಹಳೇ ಮೈಸೂರು ಪ್ರಾಂತ್ಯದ ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯೂ ಇವರಿಗೆ ದೊರೆತಿದೆ.

× Chat with us