ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ ವರ್ತನೆ ದಾರ್ಷ್ಟ್ಯತೆ ಮತ್ತು ದುರಹಂಕಾರದಿಂದ ಕೂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ರವಿ, ಶಿಕ್ಷಣ ಸಚಿವ ಪಠ್ಯ ಪುಸ್ತಕಗಳಿಂದ ಕೆಲ ಪಾಠಗಳನ್ನು ತೆಗೆದಿದ್ದೇವೆ ಅಂತ ಹೇಳದೆ ಕಿತ್ತು ಬಿಸಾಡಿದ್ದೇವೆ ಅಂತ ದುರಹಂಕಾರದಿಂದ ಹೇಳುತ್ತಾರೆ ಎಂದರು. ಯಾವ ಕಾರಣಕ್ಕೆ ಆ ಪಠ್ಯಗಳನ್ನು ತೆಗೆಯಲಾಗಿದೆ ಅಂತ ಅವರು ಸ್ಪಷ್ಟಪಡಿಸಬೇಕಿದೆ, ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡೋದು ಸರಿಯಲ್ಲ ಎಂದು ಮಾಜಿ ಸಚಿವ ಹೇಳಿದರು.
ಅವರು ತೆಗದು ಹಾಕಿದ ಪಾಠಗಳಲ್ಲಿ ಸಮಾಜಘಾತುಕ, ರಾಷ್ಟ್ರಘಾತುಕ ಅಂಶಗಳಿದ್ದರೆ ಅದನ್ನು ಜನರ ಮುಂದೆ ಇಡಲಿ, ಮಕ್ಕಳಲ್ಲಿ ದೇಶಭಕ್ತಿಯನ್ನು ಅನಾವರಣಗೊಳಿಸುವ ಪಾಠಗಳು ಸಮಾಜ ಘಾತುಕ ಅಂತ ಹೇಗೆ ಅನಿಸಿಕೊಳ್ಳುತ್ತವೆ ಎಂದು ರವಿ ಪ್ರಶ್ನಿಸಿದರು.
ಲಕ್ಷಾಂತರ ರೂ. ಫಸಲು ನಾಶವಾಗುತ್ತಿದೆ ಎಂದು ರೈತರ ಅಳಲು; ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಆಗ್ರಹ ಹನೂರು: ತಾಲ್ಲೂಕಿನ ಕಾವೇರಿ…
ಹನೂರು: ಉಡುತೊರೆ ಹಳ್ಳ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ನಿರ್ಮಾಣ ಮಾಡಿದ್ದ ಸಣ್ಣ ಸಣ್ಣ ಕಾಲುವೆಗಳನ್ನು ಮುಚ್ಚಿ ಜಮೀನು…
ಗಿರೀಶ್ ಹುಣಸೂರು ಜ್ವರ, ಶೀತ, ಕೆಮ್ಮು ಕಾಯಿಲೆಗಳ ಭೀತಿ; ಆಸ್ಪತ್ರೆಗಳಿಗೆ ಎಡತಾಕುವ ಪರಿಸ್ಥಿತಿ ಮೈಸೂರು: ರಾಜ್ಯದಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯ…
ಎಸ್.ಎಸ್.ಭಟ್ ನಂಜನಗೂಡು: ಭಾನುವಾರ ನಿಧನರಾದ ಆಧುನಿಕ ದಾವಣಗೆರೆಯ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಅವರಿಗೂ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ…
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…