ಯಡಿಯೂರಪ್ಪರನ್ನು ಯಾಕೆ ಕೆಳಗಿಳಿಸಿದ್ರಿ: ಬಿಜೆಪಿಗೆ ಎಂ.ಲಕ್ಷ್ಮಣ್‌ ಪ್ರಶ್ನೆ

ಮೈಸೂರು: ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಯಾಕೆ ಕೆಳಗಿಳಿಸಿದಿರಿ, ಅದರ ಉದ್ದೇಶ ಏನು ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ಅವರನ್ನು ಕೆಳಗಿಳಿಸಿದ್ದೀರಿ ಎಂದು ನಾವು ಅಂದುಕೊಂಡಿದ್ದೇವೆ. ಈ ವಿಚಾರವನ್ನು ನೀವು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಅವರನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡು, ಸಮುದಾಯದ ಮತ ಪಡೆದುಕೊಂಡು ಈಗ ಅವರನ್ನು ಮುಳುಗಿಸಲು ಈ ರೀತಿ ಮಾಡಿದೆ ಬಿಜೆಪಿ. ಪ್ರಮುಖ ಸಮುದಾಯಕ್ಕೆ ಸೇರಿದ ಹೋರಾಟಗಾರ ಬಿಎಸ್‌ವೈ. ನಿಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಟಗಾರರನ್ನು ಬಳಸಿಕೊಂಡಿದ್ದೀರಿ ಎಂದು ಕೇಂದ್ರದ ನಾಯಕರ ವಿರುದ್ಧ ಲಕ್ಷ್ಮಣ್‌ ಹರಿಹಾಯ್ದರು.

ಮನುವಾದಿಗಳು 12ನೇ ಶತಮಾನದಲ್ಲಿ ಬಸವಣ್ಣರನ್ನು ಅಧಿಕಾರದಿಂದ ಕೆಳಗಿಳಿಸಿದರು. ಅದೇ ಮಾದರಿ ಕಾರ್ಯವನ್ನು ಬಿಜೆಪಿ ಪಕ್ಷ ಈಗ ಮಾಡಿದೆ ಎಂದು ಟೀಕಿಸಿದರು.

× Chat with us