ಲಾಕ್‌ಡೌನ್‌ ಬಿಡುವು: ಬ್ಯಾಂಕ್‌ಗಳಿಗೆ ಜನರ ಮುತ್ತಿಗೆ, ವಾಹನಗಳ ದಟ್ಟಣೆಗೆ ಟ್ರಾಫಿಕ್‌ ಜಾಮ್

ಮೈಸೂರು: ಕೋವಿಡ್‌ ನಿಯಂತ್ರಣಕ್ಕಾಗಿ ವಿಧಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಗುರುವಾರ ಬಿಡುವು ದೊರೆತ ಹಿನ್ನೆಲೆಯಲ್ಲಿ ನಗರದ ಬ್ಯಾಂಕ್‌ಗಳಿಗೆ ಜನರು ಮುತ್ತಿಗೆ ಹಾಕಿದರು.

ಬೋಗಾದಿ, ಸಿದ್ಧಾರ್ಥನಗರದಲ್ಲಿರುವ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು. ಹಣ ಪಡೆಯುವುದು, ಹಣ ವರ್ಗಾವಣೆ ಸೇರಿದಂತೆ ಬ್ಯಾಂಕಿಗೆ ಸಂಬಂಧಿಸಿದಂತೆ ಇನ್ನಿತರ ಕಾರ್ಯಗಳಿಗಾಗಿ ಗ್ರಾಹಕರು ಜಮಾಯಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಶಿವರಾಂಪೇಟೆ ರಸ್ತೆ, ಮಹದೇವಪುರ ಮುಖ್ಯರಸ್ತೆ, ಎಪಿಎಂಸಿಯಲ್ಲಿ ಅಗತ್ಯ ವಸ್ತು, ದಿನಸಿ ಖರೀದಿಗೂ ಸಹ ಜನದಟ್ಟಣೆ ನೆರೆದಿತ್ತು. ಕೆಲವೆಡೆ ಹೆಚ್ಚಿನ ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಆಗಿದ್ದ ದೃಶ್ಯ ಕಂಡುಬಂತು.

× Chat with us