ಹಾಸನ: ಟ್ರಾನ್ಸ್‌ಫಾರ್ಮರ್‌ ದುರಸ್ತಿ ವೇಳೆ ಲೈನ್‌ಮನ್‌ಗೆ ಕರೆಂಟ್‌ ಶಾಕ್… ಮುಂದೇನಾಯ್ತು?

ಹಾಸನ: ವಿದ್ಯುತ್ ಕಂಬವೇರಿ ದುರಸ್ತಿ ಮಾಡುವಾಗ ಶಾಕ್‌ನಿಂದ ನರಳುತ್ತಿದ್ದ ಲೈನ್‌ಮನ್‌ನನ್ನು ಗ್ರಾಮಸ್ಥರು ಸಮಯಪ್ರಜ್ಞೆಯಿಂದ ಬದುಕುಳಿಸಿರುವ ಘಟನೆ ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲೈನ್‌ಮನ್‌ ಪ್ರದೀಪ್ ಬದುಕುಳಿದಾತ.

ಲೈನ್‌ಮನ್ ಪ್ರದೀಪ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಕಂಬವೇರಿದ್ದರು. ಈ ವೇಳೆ ವಿದ್ಯುತ್ ಶಾಕ್‌ಗೆ ಸಿಲುಕಿ ಪ್ರದೀಪ್ ಕಂಬದಲ್ಲೇ ನರಳಾಡಿದ್ದಾರೆ. ಕೂಡಲೇ ಗ್ರಾಮದ ಕೆಲವರು ಕಂಬವೇರಿ ಲೈನ್‌ಮನ್ ಪ್ರದೀಪನನ್ನು ರಕ್ಷಿಸಿದ್ದಾರೆ.

ಅಸ್ವಸ್ಥಗೊಂಡಿದ್ದ ಲೈನ್‌ಮನ್ ಪ್ರದೀಪ್​ಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸೂಕ್ತ ಸುರಕ್ಷತಾ ಪರಿಕರ ನೀಡದೇ ಕೆಲಸ ಮಾಡಿಸಿದ ಚೆಸ್ಕಾಂ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

× Chat with us