BREAKING NEWS

ಪಾರಂಪರಿಕ ಗಡಿಯಾರ ಸಂರಕ್ಷಿಸಲು ಬೇಕಿದೆ ‘ದೊಡ್ಡತನ’

ರಾಜರ್ಷಿ ನಾಲ್ವಡಿ ಆಡಳಿತ ರಜತ ಮಹೋತ್ಸವದ ಸ್ಮಾರಕ ಉಳಿಯಲಿ

-ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ಮೈಸೂರಿನಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ‌   ಕೊರತೆಯಿಲ್ಲ. ಅದರಲ್ಲಿ ಅರಮನೆ ದಕ್ಷಿಣ ದ್ವಾರದಲ್ಲಿರುವ ದೊಡ್ಡ ಗಡಿಯಾರವೂ ಸೇರಿದೆ. ಈ ಬೃಹತ್ ಕಾಲಸೂಚಕಕ್ಕೆ ಇತಿಹಾಸವೂ ಇದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ರಜತ ಮಹೋತ್ಸವ ನೆನಪಿಸುವ ಈ ಗಡಿಯಾರ ಅವಸಾನದ ಅಂಚಿನತ್ತ ತಿರುಗುತ್ತಿದೆ. ಹೀಗಾಗಿ ಐತಿಹಾಸಿಕ ಗಡಿಯಾರದ ಗೋಪುರವನ್ನು ಸಂರಕ್ಷಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.

ಅರಮನೆಗಳ ನಗರಿ ಮೈಸೂರಿನಲ್ಲಿ 600 ಪಾರಂಪರಿಕ ಕಟ್ಟಡಗಳಿವೆ. ನಿರ್ಲಕ್ಷ್ಯದಿಂದ ಹಲವು ಕಟ್ಟಡಗಳು ಈಗಾಗಲೇ ಅಪಾಯದ ಅಂಚಿನಲ್ಲಿವೆ. ಈ ಪಟ್ಟಿಯಲ್ಲಿ ದೊಡ್ಡ ಗಡಿಯಾರವೂ ಸೇರಿದೆ.

1927ರ ಆಗಸ್ಟ್ 27ರಂದು ಉದ್ಘಾಟನೆಗೊಂಡ ಈ ದೊಡ್ಡ ಗಡಿಯಾರ, ಇಂದು ಜನಮಾನಸದಲ್ಲಿ ದೊಡ್ಡಗಡಿಯಾರವಾಗಿ ಉಳಿದಿದೆ. ‘ಸ್ವಿಲರ್ ಜ್ಯೂಬಿಲಿ ಕ್ಲಾಕ್ ಟವರ್’ ಎಂದು ಕರೆಯಲಾಗುವ ಈ ಗೋಪುರದ ಗಡಿಯಾರ ನಗರದ ಮಧ್ಯಭಾಗದಲ್ಲಿರುವ ಅರಮನೆ ಮತ್ತು ರಂಗಾಚಾರ್ಯ ಪುರಭವನದ ಎದುರಿಗಿದೆ. ಈ ಗಡಿಯಾರಕ್ಕೆ ಮಹತ್ವದ ಸ್ಥಾನವಿದೆ. ಈ ಗೋಪುರದ ಗಡಿಯಾರದ ಕೆಳಭಾಗದಲ್ಲಿ ತಯಾರಿಸಿದ ಕಂಪನಿಯ ಹೆಸರನ್ನು ಫ್ರೆಂಚ್ ಭಾಷೆಯಲ್ಲಿ ಬರೆಯಲಾಗಿದೆ.

1927ರಲ್ಲಿ ಅರಮನೆ ಸಿಬ್ಬಂದಿ ದೇಣಿಗೆ ಸಂಗ್ರಹಿಸಿ ದೊಡ್ಡ ಗಡಿಯಾರ ನಿರ್ಮಿಸಿರುವ ದೊಡ್ಡ ಗಡಿಯಾರದಲ್ಲಿ ಬೃಹತ್ ಗಾತ್ರದ ಗಂಟೆ ಕೂಡ ಇದ್ದು  ಪ್ರತಿ ಗಂಟೆಗೊಮ್ಮೆ ಶಬ್ದ ಮಾಡುತ್ತಿತ್ತು. ಆದರೆ ಕಟ್ಟಡದ ಸುರಕ್ಷತೆ ದೃಷ್ಟಿಯಿಂದ 1990ರಲ್ಲಿ ಗಡಿಯಾರದ ಗಂಟೆ ಬಾರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ದುರಸ್ತಿ ಕಾರ್ಯದ ನೆಪದಲ್ಲಿ ದೊಡ್ಡ ಗಡಿಯಾರ ನೆನೆಗುದಿಗೆ ಬೀಳುವಂತಾಗಿದೆ.

1994ರಲ್ಲಿ ಕನ್ನಡ ಜಾಗೃತಿ ವರ್ಷದ ನೆನಪಿಗಾಗಿ ರೋಮನ್ ಅಂಕಿಗಳನ್ನು ತೆಗೆದು ಕನ್ನಡ ಅಂಕಿಗಳನ್ನು ಅಳವಡಿಸಲಾಗಿದೆ. ಗಡಿಯಾರದಲ್ಲಿ ಸಮಯ ವ್ಯತ್ಯಾಸವಾದರೆ ಗೋಪುರದ ಒಳಗೆ ಪ್ರವೇಶಿಸಿ ಇದನ್ನು ಸರಿಪಡಿಸಬಹುದು. 1927 ರಲ್ಲಿ 72 ಅಡಿಗಳಿದ್ದ ಗೋಪುರವನ್ನು ಈಗ 92 ಅಡಿಗಳಷ್ಟು ಎತ್ತರಿಸಲಾಗಿದೆ. ವಿದ್ಯುದ್ವೀಪಗಳನ್ನು ಅಳವಡಿಸಲಾಗಿದೆ. ಆದರೆ, 95 ವರ್ಷಗಳು ಪೂರ್ಣಗೊಂಡಿರುವ ದೊಡ್ಡ ಗಡಿಯಾರಕ್ಕೆ ಕಾಲ ಕಾಲಕ್ಕೆ ಸೂಕ್ತ ರೀತಿಯಲ್ಲಿ ನಿರ್ವಹಣೆ  ಮಾಡದಿದ್ದರಿಂದ ಶಿಥಿಲಾವಸ್ಥೆ ತಲುಪಿದೆ.

ಗಡಿಯಾರವನ್ನು ರಾಜಸ್ಥಾನದ ಗಾರಚಿಟ್ಟೆಂ ಮಾದರಿಯಲ್ಲಿ ಕಟ್ಟಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗಾಂಧೀಜಿ ಅವರಿಗೆ ಅಹ್ವಾನ ನೀಡಿರುತ್ತಾರೆ. ಕಾರಣಾಂತರಗಳಿಂದ ಗಾಂಧೀಜಿ ಬರಲು ಸಾಧ್ಯವಾಗುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಮೋತಿ ಲಾಲ್ ನೆಹರೂ ಗಡಿಯಾರವನ್ನು ಉದ್ಘಾಟನೆ ಮಾಡುತ್ತಾರೆ. ಗೋಪುರದಲ್ಲಿ ಬಿರುಕು ಬಿಟ್ಟಿದೆ. ಗೋಡೆಗೆ ಬಳಸಲಾಗಿದ್ದ ಕಬ್ಬಿಣ ತುಕ್ಕು ಹಿಡಿದಿದೆ. ಕಳೆದ ಐದಾರು ವರ್ಷಗಳಿಂದ ಶಿಥಿಲಾವಸ್ಥೆ ತಲುಪಿರುವ ದೊಡ್ಡ ಗಡಿಯಾರ ದುರಸ್ತಿ ಮಾಡುವಂತೆ ಒತ್ತಾಯಿಸುತ್ತಿದ್ದೇವೆ.

 ನಗರಪಾಲಿಕೆ ಅಧಿಕಾರಿಗಳು ಕೂಡ ದೊಡ್ಡ ಗಡಿಯಾರದ ಸ್ಥಿತಿಗತಿಯನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ. ಆದರೆ, ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿಲ್ಲ ಎಂಬುದು ಪಾರಂಪರಿಕ ತಜ್ಞರ ಅಭಿಪ್ರಾಯ.

ದೊಡ್ಡ ಗಡಿಯಾರದ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದೆ. ಗಂಟೆಯ ನಿರ್ವಹಣೆ ಮಾಡಬೇಕು. ಒಳಗಡೆ ರಿ ವೈರಿಂಗ್ ಮಾಡಬೇಕು. ಬಿರುಕುಗಳನ್ನು ಮುಚ್ಚಿ ಕೆಳ ಭಾಗದಲ್ಲಿ ಇಲಿ-ಹೆಗ್ಗಣದ ಬಿಲವಾಗಿದ್ದು, ಇವುಗಳನ್ನು ಮುಚ್ಚುವ ಕೆಲಸವೂ ನಡೆಯುತ್ತಿಲ್ಲ. ಈ ದೊಡ್ಡ ಗಡಿಯಾರ ಮೈಸೂರು ನಗರದ ಸೌಂದರ್ಯದ    ಪ್ರತೀಕ. ಇದನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಬೇಕು.

ಡ್ರೋಣ್ ಕ್ಯಾಮರಾ ಬಳಸಿ ನೋಡಿದಾಗ ಗೋಪುರದ ಮೇಲೆ ಬಿರುಕು ಬಿಟ್ಟಿರುವುದು ಕಂಡು ಬಂದಿತು. ಐದು ವರ್ಷಗಳಿಂದ ಸತತವಾಗಿ ಪರಿಶ್ರಮ ಪಡುತ್ತಿದ್ದೇನೆ. ಮೂರು ಬಾರಿ ದುರಸ್ತಿ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಲಾಗಿದೆ. ನಗರಪಾಲಿಕೆ ಆಯುಕ್ತರಾಗಿದ್ದ ಜಗದೀಶ್, ಶಿಲ್ಪನಾಗ್, ಗುರುದತ್ತ ಹೆಗಡೆ ಅವರಿಗೆ ಮನವಿ ಮಾಡಲಾಗಿತ್ತು. ನಿರಂತರ ಒತ್ತಾಯದ  ಪ್ರಯತ್ನದಿಂದ ಈಗ ದುರಸ್ತಿ ಕಾರ್ಯಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪುರಾತತ್ವ ಇಲಾಖೆಗೆ ಕಳುಹಿಸಲಾಗಿದೆ. ಅದನ್ನು ನಗರಪಾಲಿಕೆ ಅನುಮೋದಿಸಿ ಹಣ ಬಿಡುಗಡೆ ಮಾಡಬೇಕಾಗಿದೆ ಎಂಬುದು ಮೈಸೂರು ಪಾರಂಪರಿಕ ಸಮಿತಿ ಸದಸ್ಯ ಎನ್.ಎಸ್.ರಂಗರಾಜು ಅವರ ಅಭಿಪ್ರಾಯವಾಗಿದೆ.

 

ಸಂರಕ್ಷಣಾ ತಜ್ಞರ ಮೇಲ್ವಿಚಾರಣೆಯಲ್ಲಿ ಸಂರಕ್ಷಣೆ ಆಗಬೇಕು. ಮಹಾರಾಣಿ ಕಾಲೇಜು ಬಿದ್ದ ಹಾಗೇ ಈ ಐತಿಹಾಸಿಕ ದೊಡ್ಡ ಗಡಿಯಾರ ಬಿದ್ದರೆ ಅವಮಾನವಾಗಲಿದೆ. ಕಳೆದ ಎರಡು ವರ್ಷಗಳಿಂದ ದಸರಾಗೆ ಮೊದಲೇ ದುರಸ್ತಿಗೆ ಮಾಡುವಂತೆ ಸೂಚಿಸಲಾಗಿದೆ. ಆದರೂ ಸಂರಕ್ಷಣೆಯಾಗಿಲ್ಲ. ಕೂಡಲೇ ಎಚ್ಚೆತ್ತುಕೊಳ್ಳಬೇಕು.

 ಪ್ರೊ.ರಂಗರಾಜು, ಪಾರಂಪರಿಕ ಸಮಿತಿ ಸದಸ್ಯರು,

 

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago