ತಿರುಪತಿ : ತಿಮ್ಮಪ್ಪನ ದರ್ಶನಕ್ಕಾಗಿ ತಿರುಮಲ ಬೆಟ್ಟದಲ್ಲಿ ಕಾಲ್ನಡಿಗೆಯಲ್ಲಿ ತೆರಳಲು ಭಕ್ತರು ಗಡಗಡ ನಡುಗುತ್ತಿದ್ದಾರೆ. ಚಿರತೆಗಳ ಭಯ ಭಕ್ತರನ್ನು ಕಾಡುತ್ತಿದೆ. ಮೆಟ್ಟಿಲು ಹತ್ತಿ ಮಗುವನ್ನು ಕೊಂದ ಚಿರತೆ ಕೊನೆಗೂ ಸಿಕ್ಕಿಬಿದ್ದಿದ್ದು, ಇದೀಗ ಮತ್ತೊಂದು ಚಿರತೆ ಹಾಗೂ ಕರಡಿ ಕಾಣಿಸಿಕೊಂಡಿರುವುದರಿಂದ ತಿರುಮಲದಲ್ಲಿ ಆತಂಕ ಮೂಡಿದೆ. ನಿನ್ನೆ ಬುಧವಾರ ಬೆಳಗ್ಗೆ ಪಾದಚಾರಿ ಮಾರ್ಗದ ಬಳಿ ಚಿರತೆಯೊಂದು ಸಂಚರಿಸಿದೆ ಎಂದು ಭಕ್ತರು ಹೇಳುತ್ತಾರೆ. ಕೆಲ ಭಕ್ತರು ಗುಂಪು ಗುಂಪಾಗಿ ಹೋಗುತ್ತಿದ್ದಾಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ನಾಮಲಗಣಿ ಬಳಿ ಮರಗಳ ನಡುವೆ ಚಿರತೆ ಕಂಡ ಭಕ್ತರು ಭಯಭೀತರಾಗಿ ಓಡಿದರು.
ಸ್ವಲ್ಪ ಸಮಯದ ನಂತರ ಕರಡಿಯೂ ಕಾಣಿಸಿಕೊಂಡಿದೆ. ಗಾಬರಿಗೊಂಡ ಭಕ್ತರು ಈ ವಿಷಯವನ್ನು ಟಿಟಿಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಟಿಟಿಡಿ ಹಾಗೂ ಅರಣ್ಯಾಧಿಕಾರಿಗಳ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ತಿರುಮಲ ಅಲಿಪಿರಿ ಮಾರ್ಗದಲ್ಲಿ ಮತ್ತೆ ತೀವ್ರ ಆತಂಕ ಮತ್ತು ಉದ್ವಿಗ್ನತೆ ಉಂಟಾಗಿದೆ. ಕಾಡು ಪ್ರಾಣಿಗಳ ದಾಂಗುಡಿಯಿಟ್ಟಿ ಸರಣಿ ಘಟನೆಗಳಿಂದ ಭಕ್ತರು ಆತಂಕಗೊಂಡಿದ್ದಾರೆ.
ಈ ನಡುವೆ ತಿರುಮಲ ಮೆಟ್ಟಿಲುಗಳ ಆಸುಪಾಸಿನಲ್ಲಿ ಮೂರು ಚಿರತೆಗಳು ಓಡಾಡುತ್ತಿರುವುದನ್ನು ಟಿಟಿಡಿ ಬಹಿರಂಗಪಡಿಸಿದೆ. ಅವನ್ನು ಹಿಡಿಯಲು ಅರಣ್ಯಾಧಿಕಾರಿಗಳು ಹಾಗೂ ಟಿಟಿಡಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸಿಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ.
ತಿರುಮಲ ಮೆಟ್ಟಿಲುಗಳ ಮೇಲೆ ನಿರ್ಬಂಧಗಳು ಮುಂದುವರಿದಿದ್ದು, ಎಲ್ಲಾ ಭಕ್ತರು ಸಹಕರಿಸುವಂತೆ ಕೋರಲಾಗಿದೆ. ಚಿರತೆ ಹಿಡಿಯಲು ಕ್ರಮ ಕೈಗೊಂಡಿದ್ದು, ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡುವುದಾಗಿ ಟಿಟಿಡಿ ತಿಳಿಸಿದೆ. ಮೂರು ದಿನಗಳ ಹಿಂದೆ ತಿರುಮಲ ಮೆಟ್ಟಿಲುಗಳ ಮೇಲಿರುವ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಬಳಿ ನೆಲ್ಲೂರು ಜಿಲ್ಲೆಯ ಲಕ್ಷಿತಾ ಎಂಬ ಬಾಲಕಿಯನ್ನು ಚಿರತೆಯೊಂದು ಕೊಂದು ಹಾಕಿತ್ತು.
ನವದೆಹಲಿ: ಇಂಡಿಗೋ ವಿಮಾನಯಾ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟಿನ ನಡುವೆ ಕಾನೂನು ಮತ್ತು ನಿಯಮಗಳು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ನರೇಂದ್ರ…
ಬೆಳಗಾವಿ: ಸುವರ್ಣಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಂದು ವಿಶ್ವದಲ್ಲೇ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಿದರು.…
ಬೆಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲಾ ಮಾಡಿಸಿದ್ದ ರಿಷಬ್ ಶೆಟ್ಟಿ ತೊಡೆ ಮೇಲೆ ದೈವಾರಾಧಕ ಮಲಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.…
ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಕಾರ್ಯಾಚರಣೆಯಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ…
ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರದ ವಿರುದ್ಧ ಇಂದು 9ಕ್ಕೂ ಹೆಚ್ಚು…
ಕೆ.ಆರ್.ಪೇಟೆ: ಗಾಂಜಾ ಮತ್ತು ಮಧ್ಯ ಸೇವಿಸಿದ ಅಮಲಿನಲ್ಲಿ ಶಾಲಾ ಬಸ್ ತಡೆದು, ಅಪ್ರಾಪ್ತ ಬಾಲಕಿಯನ್ನು ತಮ್ಮ ವಶಕ್ಕೆ ನೀಡುವಂತೆ ಕಿರಿಕ್…