ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶ್ರೀಲಂಕಾ ವೇಗಿ ಲಸಿತ್‌ ಮಾಲಿಂಗ್‌ ನಿವೃತ್ತಿ ಘೋಷಣೆ

ಹೊಸದಿಲ್ಲಿ: ಶ್ರೀಲಂಕಾ ತಂಡದ ವೇಗಿ ಬೌಲರ್‌ ಲಸಿತ್‌ ಮಾಲಿಂಗ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ʻಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದೇನೆ. ನನ್ನ ಪ್ರಯಾಣದುದ್ದಕ್ಕೂ ಬೆಂಬಲ ನೀಡಿದ ಎಲ್ಲರಿಗೂ ಚಿರಋಣಿ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಯುವ ಆಟಗಾರರಿಗೆ ಮಾರ್ಗದರ್ಶನ ಮಾಡುವುದಾಗಿʼ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಯಾರ್ಕರ್‌ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳ ಬೆವರಿಳಿಸಿದ್ದ ಶ್ರೀಲಂಕಾ ಪರವಾಗಿ 30 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 101 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 226 ಏಕದಿನ ಪಂದ್ಯಗಳಿಂದ 338 ವಿಕೆಟ್ ಹಾಗೂ 83 ಟಿ20 ಪಂದ್ಯಗಳಲ್ಲಿ 107 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಲಸಿತ್ ಮಾಲಿಂಗ 122 ಪಂದ್ಯಗಳಿಂದ 170 ವಿಕೆಟ್ ಉರುಳಿಸಿದ್ದಾರೆ.

ಈ ಹಿಂದೆ ಟೆಸ್ಟ್‌ ಮತ್ತು ಏಕದಿನಕ್ಕೆ ವಿದಾಯ ಹೇಳಿದ್ದ ಮಾಲಿಂಗ ಟಿ20 ಕ್ರಿಕೆಟ್​ನಲ್ಲಿ ಮುಂದುವರೆದಿದ್ದರು. ಟಿ20 ವಿಶ್ವಕಪ್​ಗಾಗಿ ಆಯ್ಕೆ ಮಾಡಲಾಗಿರುವ ಲಂಕಾ ತಂಡದಲ್ಲಿ ಮಾಲಿಂಗಗೆ ಸ್ಥಾನ ನೀಡಲಾಗಿರಲಿಲ್ಲ. ಹೀಗಾಗಿ, ಟಿ20 ಕ್ರಿಕೆಟ್​ಗೆ ವಿದಾಯ ಹೇಳುವ ಮೂಲಕ ಎಲ್ಲಾ ಮಾದರಿ ಕ್ರಿಕೆಟ್​ಗೆ ಗುಡ್ ಬೈ ಹೇಳುತ್ತಿರುವುದಾಗಿ ಯಾರ್ಕರ್ ಕಿಂಗ್ ತಿಳಿಸಿದ್ದಾರೆ.

× Chat with us