ಹುಲಿ ದಾಳಿ: ನಿನ್ನೆ ವಿದ್ಯಾರ್ಥಿ ಇಂದು ಕಾರ್ಮಿಕ ಮಹಿಳೆ ಬಲಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರವಷ್ಟೆ 14 ವರ್ಷದ ಬಾಲಕನನ್ನು ಬಲಿ ಪಡೆದಿದ್ದ ವ್ಯಾಘ್ರ ಭಾನುವಾರ ಮುಂಜಾನೆ ಮಹಿಳೆಯೊಬ್ಬರನ್ನು ಬಲಿ ಪಡೆಯುವ ಮೂಲಕ ಆತಂಕ ಸೃಷ್ಟಿಸಿದೆ.

ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿಯ ಆಲೆಮಾಡ ಸೋಮಣ್ಣ ಬೋಪಣ್ಣ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ ಎರವರ ಚಿನ್ನಿ (60) ಮೃತ ದುರ್ದೈವಿ.

ಮುಂಜಾನೆ ಮನೆಯಿಂದ ಚಿನ್ನಿ ಹೊರಬಂದ ಸಂದರ್ಭ ವ್ಯಾಘ್ರ ದಾಳಿ ನಡೆಸಿದ್ದು, ಮನೆಯಲ್ಲಿದ್ದವರು ಹೊರಗೆ ಬರುವಷ್ಟರಲ್ಲಿ ಹುಲಿ ಮಹಿಳೆಯನ್ನು ಕೊಂದು ತೋಟದಲ್ಲಿ ಮರೆಯಾಗಿದೆ. ಮನೆಯ 20 ಅಡಿ ದೂರದಲ್ಲೇ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಸಾಕಾನೆಗಳ ಮೂಲಕ ಹುಲಿ ಸೆರೆಗೆ ಮುಂದಾಗಿದೆ.

× Chat with us