BREAKING NEWS

ಖ್ಯಾತ ಕಥೆಗಾರ, ಸಂಘಟಕ ಕುಕ್ಕರಹಳ್ಳಿ ಬಸವರಾಜು ಇನ್ನಿಲ್ಲ

ಮೈಸೂರು : ಖ್ಯಾತ ಕಥೆಗಾರ, ಲೇಖಕ, ರಂಗಕರ್ಮಿ ಕುಕ್ಕರಹಳ್ಳಿ ಬಸವರಾಜು (02 Oct 1955)  ಅವರು ಗುರುವಾರ ಮೈಸೂರಿನ ರಾಮಕೃಷ್ಣನಗರದ ತಮ್ಮ ನಿವಾಸದಲ್ಲಿ  ನಿಧನರಾಗಿದ್ದಾರೆ. ಅವರಿಗೆ  67 ವರ್ಷ ವಯಸ್ಸಾಗಿತ್ತು.

ಮೈಸೂರು ನಗರದ ಭಾಗವಾಗಿರುವ ಕುಕ್ಕರಹಳ್ಳಿಯಲ್ಲಿ ಧನಗಳ್ಳಿ ಸಿದ್ಧಯ್ಯ ಮತ್ತು- ನಿಂಗಮ್ಮದಂಪತಿಯ ಮಗನಾಗಿ ಜನಿಸಿದ ಬಸವರಾಜು ಅವರು ಬಹುಮುಖ ಪ್ರತಿಭೆ. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅವರು ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜು ಮತ್ತು ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದ್ದರು. ಪದವಿ ಓದುತ್ತಿದ್ದಾಗಲೇ “ಸ್ಟೂಡೆಂಟ್ ಫಾರ್ ಡೆಮಾಕ್ರಸಿʼ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿ ದುಡಿದಿದ್ದರು. ಎಂಸಿಡಿಸಿಸಿ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಅನೂಪ್ ಎಸ್.ಬಸು ಇವರ ಪುತ್ರರಾಗಿದ್ದಾರೆ. ಇವರ ಅಂತ್ಯಕ್ರಿಯೆಯು ನಾಳೆ ( ಶುಕ್ರವಾರ) ಬೆಳಿಗ್ಗೆ ೧೦ ಗಂಟೆಗೆ ಚಾಮುಂಡಿಬೆಟ್ಟದ ವಿದ್ಯುತ್ ಚಿತಾಗಾರದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರವೃತ್ತಿಯಲ್ಲಿ ಕಥೆಗಾರರಾಗಿರುವ ಅವರು ಸಾಹಿತ್ಯದ ಜತೆ ಸಾಕ್ಷರತೆ ಚಳವಳಿ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ದುಡಿದವರು. 2019ರಲ್ಲಿ ಅವರ ಕಾಲನೊದ್ದವರು ನೀಳ್ಗತೆ ಪ್ರಕಟವಾಗಿದ್ದು, 2020 ರಲ್ಲಿ ಅವರ “ಅವ್ವ ಬರಲೇ ಇಲ್ಲʼ ಕವನ ಸಂಗ್ರಹ ಪ್ರಕಟವಾಗಿದೆ.

ರಂಗಕರ್ಮಿಯಾಗಿ ಬಿ.ವಿ.ಕಾರಂತರ ನಿರ್ದೇಶನದ ಹಯವದನ ನಾಟಕದ ಜೊತೆಗೆ, ಹಲವು ನಿರ್ದೇಶಕರ ನಾಟಕಗಳು ಹಾಗೂ ಸಾಕ್ಷರತೆಯ ಬೀದಿ ನಾಟಕಗಳಲ್ಲಿ ನಟಿಸಿದ್ದರು. ಮೈಸೂರಿನ ಮಂಟೇಸ್ವಾಮಿ ಪ್ರತಿಷ್ಠಾನದ ಸದಸ್ಯರಾಗಿ, “ಸಂಕುಲʼ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ರಂಗಾಯಣ ಹಾಗೂ ಮಂಟೇಸ್ವಾಮಿ ಪ್ರತಿಷ್ಠಾನದ ಜತೆಗೂಡಿ ಮಂಟೇಸ್ವಾಮಿ ಜಾನಪದಮೇಳ, ರಂಗಾಯಣದೊಟ್ಟಿಗೆ ವಿಮರ್ಶೆಯ ವಿಮರ್ಶೆ, ಮೈಸೂರಿನ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ “50ರ ಮಧ್ಯರಾತ್ರಿʼ ಸ್ವಾತಂತ್ರ್ಯದ ಆಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.

ನಿಸರ್ಗ ಟ್ರಸ್ಟ್(ರಿ) ನೈಸರ್ಗಿಕ ಆಹಾರೋತ್ಪನ್ನ ಕೇಂದ್ರದ ಅಧ್ಯಕ್ಷರಾಗಿ , ಸಾವಯವ ರೈತರ ಮಾರುಕಟ್ಟೆಗೆ ರೈತರ ಸಂತೆಯ ಆಯೋಜನೆ, ಸಾವಯವ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಕೇಂದ್ರಗಳ ತೆರೆಯುವಿಕೆ, ಹೊನ್ನೂರಿನಲ್ಲಿ ನಿಸರ್ಗ ಟ್ರಸ್ಟ್ ವತಿಯಿಂದ ಸಾವಯವ ರೈತರಿಗಾಗಿ ಸಾಮೂಹಿಕ ಹೈನುಗಾರಿಕೆ ಬೇಸಾಯ ಮುಂತಾದ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದರು. ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು ಇವರು ಆಯೋಜಿಸುತ್ತಿದ್ದ ಸಾಕ್ಷರತಾ ಚಳುವಳಿಗಳಲ್ಲಿ ಹಾಗೂ ಸಾಹಿತ್ಯ ರಚನಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು “ನೀನೇ ಕಾರಣʼ, “ಸಾಕಮ್ಮನ ಕಥೆʼ, “ಸಮಾನತೆʼ, “ಹುಲಿ ಮತ್ತು ಕತ್ತೆʼ ಸೇರಿದಂತೆ ಹಲವು ಕಥಾ ಪುಸ್ತಕಗಳನ್ನು ರಚಿಸಿದ್ದಾರೆ.

ಮಾನವ ನಿರ್ಮಿತ ಅದ್ಭುತಗಳು ನವಸಾಕ್ಷರಿಗಾಗಿ ಮಾಹಿತಿ ಪುಸ್ತಕ, “ರಾಗ ಸಂಗಮʼ ವಿವಿಧ ಲೇಖಕರುಗಳ ನಾಟಕ ಸಂಗ್ರಹಿಸಿದ್ದಾರೆ. “ಸೂರಿಲ್ಲದ ರಂಗದಲಿʼ(ಮೂರು ಸಂಪುಟ) ವಿವಿಧ ಲೇಖಕರುಗಳ ನಾಟಕ ಸಂಗ್ರಹ ಸೇರಿದಂತೆ ಹಲವು ವೃತ್ತಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ʼಮೊಕಾರʼ ಸಂಕಲನದ “ನೀರುʼ ಕಥೆ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.

“ಬಾಳಾಟʼ ಕಥಾಸಂಕನದಲ್ಲಿರುವ ಮುನ್ನುಡಿಯಲ್ಲಿನ ಅವ್ವ ಪದ್ಯ ಮತ್ತು ಹಂಪಿ ಕನ್ನಡ ವಿವಿ ಪ್ರಕಟಿಸಿದ ” ನಾನೇಕೆ ಬರೆಯುತ್ತೇನೆ ʼಎನ್ನುವ ಲೇಖನ ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಎಂಎ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.

ಪ್ರಶಸ್ತಿಗಳು:

ಕುಕ್ಕರಹಳ್ಳಿ ಬಸವರಾಜು ಅವರಿಗೆ 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, 2003ರಲ್ಲಿ ವಿಶ್ವನಾಥ್ ಕೆ.ವಾರಂಬಳ್ಳಿ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ, 2016ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ದೊರೆತಿದೆ. 2016 ಡಿಸೆಂಬರ್ 12ರಂದು ನಡೆದ ಮೈಸೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

andolanait

Recent Posts

ಹಿರಿಯೂರಿನಲ್ಲಿ ₹2,328 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ | ‘ನುಡಿದಂತೆ ನಡೆಯುತ್ತೇನೆ’ ಎಂದ ಡಿಕೆಶಿ

ಚಿತ್ರದುರ್ಗ:  ‘ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ. ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ’ ಎಂದು ಮುಖ್ಯಮಂತ್ರಿ ಡಿ.ಕೆ.…

4 hours ago

ಪರಿಷತ್ ಚುನಾವಣೆ ಸೋಲು | ‘ನನ್ನನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕು’ ಎಂದ ಕೆ.ಎನ್. ರಾಜಣ್ಣ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಸೋಲಿಗೆ ನೈತಿಕ ಹೊಣೆ ಹೊತ್ತು, ತಮ್ಮನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ಶಾಸಕ…

5 hours ago

ಗುಂಡ್ಲುಪೇಟೆ: ಗರ್ಭಿಣಿ ಆನೆಯ ಮೃತದೇಹ ಪತ್ತೆ

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವ್ಯಾಪ್ತಿಯಲ್ಲಿ ಸುಮಾರು 35 ವರ್ಷ ವಯಸ್ಸಿನ…

6 hours ago

ಮುರುಸು ಚಂಡಮಾರುತ ಎಫೆಕ್ಟ್:‌ ರಾಜ್ಯದಲ್ಲಿ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು:  ಬಂಗಾಳ ಉಪಸಾಗರದಲ್ಲಿ ರೂಪುಗೊಂಡಿರುವ ‘ಮುರಸು’ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲೂ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ರಾಜ್ಯದ…

6 hours ago

ಸ್ಕೂಟರ್‌ಗೆ ಸಾರಿಗೆ ಬಸ್ ಡಿಕ್ಕಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು

ಮೈಸೂರು: ಅರಮನೆ ಸಮೀಪದ ಚಾಮರಾಜ ವೃತ್ತದ ಬಳಿ ಸ್ಕೂಟರ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 17 ವರ್ಷದ ವಿದ್ಯಾರ್ಥಿನಿ…

8 hours ago

ಕೆ.ಆರ್.ನಗರದಲ್ಲಿ ತಾಯಿ–ನವಜಾತ ಶಿಶು ಸಾವು, ವೈದ್ಯರ ನಿರ್ಲಕ್ಷ್ಯವೆಂದು ಆರೋಪಿಸಿ ಪ್ರತಿಭಟನೆ

ಕೆ.ಆರ್.ನಗರ: ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ 25 ವರ್ಷದ ಸುಶ್ಮಿತಾ ಹಾಗೂ ಅವರ ನವಜಾತ ಶಿಶು…

8 hours ago