ಪೊಲೀಸ್‌ ಇದ್ರೆ ನಮ್ಗೇನು ಭಯನಾ? ಆರಕ್ಷಕರ ಕಣ್ಗಾವಲಲ್ಲೂ ಸಾರಿಗೆ ಬಸ್‌ಗೆ ಕಲ್ಲು

ಮೈಸೂರು: ಪೊಲೀಸ್ ಭದ್ರತೆ ನಡುವೆಯೂ ಕೆಎಸ್‌ಆರ್‌ಟಿಸಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಜಿಲ್ಲೆಯ ಪಿರಿಯಾಪಟ್ಟಣ ಸಾರಿಗೆ ಘಟಕದಿಂದ ಇಂದು ಬೆಳಗ್ಗೆ 1 ಬಸ್ ಮಾತ್ರ ಸಂಚರಿಸಿತ್ತು. ಸಾರಿಗೆ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಭದ್ರತೆಯೊಂದಿಗೆ ಈ ಬಸ್’ನಲ್ಲಿ ಪಿರಿಯಾಪಟ್ಟಣದಿಂದ ಬೆಟ್ಟದಪುರಕ್ಕೆ ಪ್ರಯಾಣಿಕರನ್ನು ಕರೆದೊಯ್ದಿದ್ದು ಮತ್ತೆ ಬೆಟ್ಟದಪುರದಿಂದ ಪಿರಿಯಾಪಟ್ಟಣಕ್ಕೆ ಬರುವ ಸಂದರ್ಭ ಸೀಗೂರು ಗೇಟ್ ಬಳಿ ಹಿಂಭಾಗದ ಗ್ಲಾಸ್ ಮೇಲೆ ಕಲ್ಲು ತೂರಿ ಹಾನಿ ಮಾಡಿದ್ದಾರೆ.

ಬಸ್ ನಲ್ಲಿ 26ಮಂದಿ ಪ್ರಯಾಣಿಕರು ಹಾಗೂ 6 ಮಂದಿ ಸಾರಿಗೆ ಸಿಬ್ಬಂದಿ ಪ್ರಯಾಣಿಸುತ್ತಿದ್ದರು, ಘಟನೆ ನಡೆದ ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ತಕ್ಷಣ ಭದ್ರತೆ ವಾಹನದಲ್ಲಿದ್ದ ಮೈಸೂರು ವಿಭಾಗೀಯ ಕಾರ್ಮಿಕ ನಿರೀಕ್ಷಕ ಸೋಮಶೇಖರ್, ಘಟಕ ವ್ಯವಸ್ಥಾಪಕ ದರ್ಶನ್ ಹಾಗೂ ಆರಕ್ಷಕ ಸಿಬ್ಬಂದಿ ಬಸ್ ಅನ್ನು ಬೆಟ್ಟದಪುರ ಠಾಣೆಗೆ ಕೊಂಡೊಯ್ದಿದ್ದಾರೆ.

× Chat with us