ಮೈಸೂರಿನಲ್ಲಿ ಸಂಚಾರ ಆರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳು

ಮೈಸೂರು: ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಸಾರಿಗೆ ನೌಕರರು ವಾಪಸ್‌ ಪಡೆದಿದ್ದು, ರಾಜ್ಯದ ಹಲವೆಡೆ ಬಸ್‌ಗಳು ಸಂಚಾರ ಆರಂಭಿಸಿವೆ. ಅಂತೆಯೇ ಮೈಸೂರಿನಲ್ಲೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಿದವು.

ಮುಷ್ಕರ ವಾಪಸ್‌ ಪಡೆಯುತ್ತಿದ್ದಂತೆ ನೌಕರರು ಕರ್ತವ್ಯಕ್ಕೆ ಹಾಜರಾದರು. ಬಸ್‌ಗಳ ಸಂಚಾರಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಕೆಲವು ಬಸ್‌ಗಳು ಈಗಾಗಲೇ ವಿವಿಧೆಡೆಗೆ ಸಂಚಾರ ಆರಂಭಿಸಿವೆ.

ಸಾರಿಗೆ ನೌಕರರ ಮನವೊಲಿಸುವಲ್ಲಿ ಸರ್ಕಾರ ಕೊನೆಗೂ ಯಶಸ್ವಿಯಾಗಿದ್ದು, ಮುಷ್ಕರ ವಾಪಸ್‌ ಪಡೆಯಲಾಗಿದೆ. ಬೇಡಿಕೆ ಈಡೇರಿಕೆಗೆ ನೌಕರರು ಮೂರು ತಿಂಗಳ ಗಡುವು ನೀಡಿದ್ದಾರೆ. ಅವಧಿಯೊಳಗಡೆ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

× Chat with us