ಕೊಡಗಿನಲ್ಲಿ ಸಂಪೂರ್ಣ ಅನ್‌ಲಾಕ್ ಸಂಶಯ: ಶಾಸಕ ಅಪ್ಪಚ್ಚು ರಂಜನ್

ಕೊಡಗು: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಹೀಗಾಗಿ, ಜಿಲ್ಲೆ ಸಂಪೂರ್ಣ ಅನ್‌ಲಾಕ್‌ ಸಾಧ್ಯತೆ ಕಡಿಮೆ ಎಂದು ಶಾಸಕ ಅಪ್ಪಚ್ಚು ರಂಜನ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಹೀಗಾಗಿ, ಕೋವಿಡ್ ಸಂಖ್ಯೆ ಕಡಮೆಯಾಗುತ್ತಿಲ್ಲ. ಪಾಸಿಟಿವಿಟಿ ರೇಟ್ ಕೂಡ ಕಡಿಮೆಯಾಗುತ್ತಿಲ್ಲ. ನಿತ್ಯ ಸರಾಸರಿ 100 ಸಂಖ್ಯೆಗೆ ಇಳಿಕೆ ಆಗುವವರಿಗೆ ಸಂಪೂರ್ಣ ಅನ್‌ಲಾಕ್ ಕಷ್ಟ ಎಂದು ತಿಳಿಸಿದರು.

ಅಸ್ಸಾಂ, ಬಿಹಾರ್ ಸೇರಿದಂತೆ ಹೊರರಾಜ್ಯಗಳಿಂದ ಬರುತ್ತಿರುವ ಕಾರ್ಮಿಕರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಹೊರರಾಜ್ಯದ ಕಾರ್ಮಿಕರಿಗೆ ಕ್ವಾರಂಟೈನ್ ಮಾಡಿಯೇ ಕೆಲಸ ಕೊಡಬೇಕು ಎಂದರು.

ಜಿಲ್ಲಾಧಿಕಾರಿ ವಾರದ 5 ದಿನ ಮಧ್ಯಾಹ್ನದವರೆಗೆ ಅನ್‌ಲಾಕ್ ಮಾಡುವ ಸಲಹೆ ನೀಡಿದ್ದಾರೆ. ಇದರ ಬದಲಿಗೆ ವಾರದ 3 ದಿನ (ಸೋಮವಾರ, ಬುಧವಾರ, ಶುಕ್ರವಾರ) ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅನ್‌ಲಾಕ್ ಮಾಡಬಹುದು. ಹೋಂ ಸ್ಟೇ, ರೆಸಾರ್ಟ್‌ ಮೇಲೆ ಹದ್ದಿನಕಣ್ಣು, ಪ್ರವಾಸಿಗರಿಗೆ ತೆರೆಯದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

× Chat with us