ಕೆ.ಎಲ್.ರಾಹುಲ್‌ಗೆ ಹೊಟ್ಟೆನೋವು, ಶಸ್ತ್ರ ಚಿಕಿತ್ಸೆ: ಐಪಿಎಲ್‌ನಿಂದ ಔಟ್‌?

ಅಹಮದಾಬಾದ್‌: ಐಪಿಎಲ್‌ ಫ್ರಾಂಚೈಸಿ, ಪಂಜಾಬ್‌ ಕಿಂಗ್ಸ್‌ ನಾಯಕ ಕೆ.ಎಲ್‌.ರಾಹುಲ್‌ ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎನ್ನಲಾಗಿದೆ. ಚಿಕಿತ್ಸೆ ನಂತರ ವಿಶ್ರಾಂತಿ ಅಗತ್ಯವಿರುವುದರಿಂದ ಅವರು ಐಪಿಎಲ್‌ನಿಂದ ಹೊರ ಉಳಿಯುವ ಸಾಧ್ಯತೆ ಇದೆ.

ಕಳೆದ ರಾತ್ರಿ ಕೆ.ಎಲ್.ರಾಹುಲ್‌ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಚಿಕಿತ್ಸೆಗೆ ಸ್ಪಂದಿಸಿಲ್ಲ. ತುರ್ತು ನಿಗಾ ಘಟಕದಲ್ಲಿ ಪರೀಕ್ಷಿಸಿದಾಗ ರಾಹುಲ್‌ ಅವರಿಗೆ ಕರುಳು ಸಂಬಂಧಿ ಕಾಯಿಲೆ (ಅಪೆಂಡಿಸೈಟಿಸ್‌) ಇರುವುದು ತಿಳಿದುಬಂದಿದೆ. ಹೀಗಾಗಿ, ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂಬೈನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರಾಹುಲ್‌ ಅವರನ್ನು ದಾಖಲಿಸಲಾಗಿದ್ದು, ಭಾನುವಾರ ಶಸ್ತ್ರಚಿಕಿತ್ಸೆ ನಡೆಯುವ ಬಗ್ಗೆ ತಿಳಿಸಲಾಗಿತ್ತು. 10 ದಿನಗಳೊಳಗೆ ರಾಹುಲ್‌ ಚೇತರಿಸಿಕೊಂಡು ಐಪಿಎಲ್‌ಗೆ ಮರಳಬಹುದು ಎಂಬುದು ಪಂಜಾಬ್‌ ತಂಡದ ನಿರೀಕ್ಷೆಯಾಗಿದೆ.

ಪಂಜಾಬ್‌ ತಂಡ ಮುನ್ನಡೆಸಲು ರಾಹುಲ್‌ ಮಾತ್ರ ಸಮರ್ಥರು. ಈಗ ಅವರ ಅನುಪಸ್ಥಿತಿಯಿಂದ ತಂಡ ಮುನ್ನಡೆಸುವುದು ಕಷ್ಟದ ಕೆಲಸವಾಗುತ್ತದೆ. ರಾಹುಲ್‌ ಅನುಪಸ್ಥಿತಿಯಲ್ಲಿ ಮಾಯಂಕ್‌ ಅಗರ್‌ವಾಲ್‌ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಆದರೆ, ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾದರು.

× Chat with us