ಮುಂಬೈ : ಮಹೀಂದ್ರಾ & ಮಹೀಂದ್ರಾ ಕಂಪೆನಿಯ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ತಮ್ಮ 99ನೇ ವಯಸ್ಸಿನಲ್ಲಿ ನಿಧರಾಗಿದ್ದಾರೆ. $1.2 ಬಿಲಿಯನ್ (₹98,518,203,600) ಆಸ್ತಿಯನ್ನು ಹೊಂದಿರುವ ಇವರು ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಎಂದು ಖ್ಯಾತಿ ಪಡೆದಿದ್ದರು.
1923ರ ಅಕ್ಟೋಬರ್ 9ರಂದು ಶಿಮ್ಲಾದಲ್ಲಿ ಜನಿಸಿದ್ದ ಕೇಶುಬ್ ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. 1947ರಲ್ಲಿ ಮಹೀಂದ್ರಾ ಆಂಡ್ ಮಹೀಂದ್ರಾ ಗ್ರೂಪ್‌ನಲ್ಲಿ ಕೆಲಸ ಆರಂಭಿಸಿದ ಇವರು 1963ರಲ್ಲಿ ಕಂಪೆನಿಯ ಅಧ್ಯಕ್ಷರಾಗಿ ಆಯ್ಕೆಯಾದರು.
ಸುಮಾರು 48 ಮಹೀಂದ್ರಾ ಗ್ರೂಪ್ ಕಂಪೆನಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೇಶುಬ್ ಅವರು ಕಂಪೆನಿಯನ್ನು ಆಟೋಮೊಬೈಲ್ ಕ್ಷೇತ್ರದಿಂದ ಐಟಿ, ರಿಯಲ್ ಎಸ್ಟೇಟ್, ಹಣಕಾಸು ಸೇವೆಗಳು ಹೀಗೆ ಇತರ ಕ್ಷೇತ್ರಗಳಿಗೂ ವಿಸ್ತರಿಸಿದ್ದರು.ಅಲ್ಲದೇ ವಿಲ್ಲಿಸ್ ಕಾರ್ಪೊರೇಷನ್, ಮಿತ್ಸುಬಿಷಿ, ಇಂಟರ್ನ್ಯಾಷನಲ್ ಹಾರ್ವೆಸ್ಟರ್, ಯುನೈಟೆಡ್ ಟೆಕ್ನಾಲಜೀಸ್, ಬ್ರಿಟಿಷ್ ಟೆಲಿಕಾಂ ಅಂತಹ ಜಾಗತಿಕ ಕಂಪೆನಿಗಳ ಮೈತ್ರಿ ಮಾಡಿಕೊಂಡು ವ್ಯಾಪಾರ ವಿಸ್ತರಿಸಿದ್ದರು.ಜೆಆರ್‌ಡಿ ಟಾಟಾ ಅವರ ಅಭಿಮಾನಿಯಾದ ಇವರು ತನ್ನ ಸಾಧನೆಗೆ ಅವರೇ ಸ್ಪೂರ್ತಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
2021ರಲ್ಲಿ ಕಂಪೆನಿಯ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಿದ್ದರು. ತದನಂತರ ಕಂಪೆನಿಯ ರೂವಾರಿಯನ್ನು ಕೇಶುಬ್ ಮಹೀಂದ್ರಾ ಅವರ ಸೋದರಳಿಯ ಆನಂದ್ ಮಹೀಂದ್ರಾ ವಹಿಸಿಕೊಂಡಿದ್ದರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…