ತಲಕಾವೇರಿಯಲ್ಲಿ ಕೇರಳದ ಯುವಕರ ಪುಂಡಾಟ!

ಕೊಡಗು: ಮಾಸ್ಕ್‌ ಹಾಕುವಂತೆ ಹೇಳಿದ್ದಕ್ಕೆ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆಯೇ ಕೇರಳದ ಯುವಕರ ಗುಂಪೊಂದು ಹಲ್ಲೆಗೆ ಮುಂದಾದ ಘಟನೆ ತಲಕಾವೇರಿ ಕ್ಷೇತ್ರದಲ್ಲಿ ಭಾನುವಾರ ಸಂಜೆ ನಡೆದಿದೆ.

ಪ್ರವಾಸಕ್ಕೆಂದು ಬಂದಿದ್ದ ಕೇರಳದ ಯುವಕರು ಮಾಸ್ಕ್‌ ಧರಿಸಿರಲಿಲ್ಲ. ಮಾಸ್ಕ್‌ ಧರಿಸುವಂತೆ ಸಲಹೆ ನೀಡಿದ ಸಮಿತಿ ಅಧ್ಯಕ್ಷ ಬಿ.ಎಸ್‌.ತಿಮ್ಮಯ್ಯ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ, ಪ್ರಶ್ನಿಸಲು ಮುಂದಾದ ವ್ಯಕ್ತಿಯೊಬ್ಬರ ಕೈ ಬೆರಳನ್ನು ಮುರಿದಿದ್ದಾರೆ ಎನ್ನಲಾಗಿದೆ.

ಇವರು ಯುವತಿಯರನ್ನು ಚುಡಾಯಿಸುತ್ತಿದ್ದರು. ಈ ಬಗ್ಗೆ ಕ್ಷೇತ್ರದ ಸೆಕ್ಯುರಿಟಿ ಎಚ್ಚರಿಕೆ ನೀಡಿದರೆ, ಅವರ ಮೇಲೂ ಹರಿಹಾಯ್ದಿದ್ದಾರೆ. ಅಲ್ಲದೇ, ಕ್ಷೇತ್ರಕ್ಕೆ ಭೇಟಿ ನೀಡಿದ್ದ ಕೆಲವರು ಸ್ಥಳೀಯರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೇರಳದ 10 ಯುವಕರನ್ನು ವಶಕ್ಕೆ ಪಡೆದಿದ್ದಾರೆ.

× Chat with us