ಇಂದು ಪಂಚರಾಜ್ಯಗಳಲ್ಲೂ ಮತದಾನ: ತಮಿಳುನಾಡು, ಕೇರಳ, ಪುದುಚೇರಿ ಒಂದೇ ಹಂತದಲ್ಲಿ ಪೂರ್ಣ

ಹೊಸದಿಲ್ಲಿ: ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ಇಂದು (ಮಂಗಳವಾರ) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂಗೆ ಮೂರನೇ ಮತ್ತು ಕೊನೆಯ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ.

ಕೇರಳದಲ್ಲಿ 140, ತಮಿಳನಾಡು 234, ಪುದುಚೇರಿಯ 30 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಕೊನೆಯ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೂರನೆ ಹಂತದಲ್ಲಿ 31 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ತಮಿಳುನಾಡಿನಲ್ಲಿ ಪ್ರಮುಖರಾದ ನಟ ರಜನಿಕಾಂತ್‌, ಎಂಎನ್‌ಎಂ ಮುಖ್ಯಸ್ಥ ಕಮಲ್‌ ಹಾಸನ್‌, ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಮತದಾನ ಮಾಡಿದ್ದಾರೆ.