`ಆರೋಪಿಗಳ ಹಡೆಮುರಿ ಕಟ್ಟುವವರು ಕರ್ನಾಟಕ ಪೊಲೀಸರು’

ಮೈಸೂರು: ಪ್ರಮಾಣಿವಾಗಿ ಕೆಲಸ ಮಾಡುವುದರ ಜೊತೆಗೆ ಯಾವುದೇ ಸಂದರ್ಭ ಬಂದರೂ ಶೀಘ್ರವಾಗಿ ಅಪರಾಧಿಗಳ ಸುಳಿವನ್ನು ಜಾಡುಹಿಡಿದು ಹೆಡೆಮುರಿ ಕಟ್ಟುವವರು ನಮ್ಮ ಕರ್ನಾಟಕದ ಪೊಲೀಸರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರಿಂದು ಕೆ.ಆರ್.ನಗರ ತಾಲ್ಲೂಕಿನ “ಪೊಲೀಸ್ ವಸತಿ ಗೃಹ-2020 ಫೆಸ್ 03 ಯೋಜನೆಯಡಿ ನೂತನವಾಗಿ ನಿರ್ಮಿಸಲಾಗಿರುವ 24 ಪೊಲೀಸ್ ವಸತಿ ಗೃಹಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲೆ ಕರ್ನಾಟಕದ ಪೊಲೀಸರ ಕಾರ್ಯವೈಖರಿಗೆ ಹೆಸರುವಾಸಿ. ಇವರು ಕಾರ್ಯನಿರ್ವಹಿಸುತ್ತಿರುವುದರಿಂದಲೇ ಜನರು ನಮ್ಮದಿಯಿಂದ ಓಡಾಡುವಂತಾಗಿದೆ. ಪ್ರಾಮಾಣಿಕವಾಗಿ ಕಾರ್ಯನಿರ್ಹಹಿಸುವ ಪೊಲೀಸರಿಗೆ ಮನೆಯ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.

ಮಳೆ, ಗಾಳಿ ಯಾವುದನ್ನು ಪರಿಗಣಿಸದೆ 24 ಗಂಟೆಯೂ ಸೇವೆ ಸಲ್ಲಿಸುವವರು ಪೊಲೀಸರು. ಯಾವುದೇ ತೊಂದರೆ ಬಂದರೂ ಜನರು ಮೊದಲು ಬರುವುದೇ ಪೊಲೀಸರ ಬಳಿಗೆ, ಅಂಥವರಿಗೆ ಪ್ರಮಾಣಿಕವಾಗಿ ಸ್ಪಂಧಿಸುವ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗುತ್ತಾರೆ. ಹೀಗಾಗಿ ಸರ್ಕಾರ ಎಲ್ಲ ಕಡೆ ಪೊಲೀಸರಿಗೆ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದೆ ಎಂದು ಹೇಳಿದರು.

ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಪುರಸಭೆ ಅಧ್ಯಕ್ಷ ಸುಬ್ರಹ್ಮಣ್ಯ, ಕೆ.ಎಲ್.ಜಗದೀಶ್ ಸೇರಿದಂತೆ ಇತರರು ಹಾಜರಿದ್ದರು.

× Chat with us