ನೂತನ ಸಿಎಂ ಆಯ್ಕೆ: ವೀಕ್ಷಕರಾಗಿ ಕಿಷನ್‌ ರೆಡ್ಡಿ, ಧರ್ಮೇಂದ್ರ ಪ್ರಧಾನ್‌ ಬೆಂಗಳೂರಿಗೆ

ಬೆಂಗಳೂರು: ನೂತನ ಮುಖ್ಯಮಂತ್ರಿ ಆಯ್ಕೆ‌ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಜಿ.ಕಿಷನ್‌ ರೆಡ್ಡಿ ಹಾಗೂ ಧರ್ಮೇಂದ್ರ ಪ್ರಧಾನ್‌ ಅವರು ಬಿಜೆಪಿ ವೀಕ್ಷಕರಾಗಿ ಆಗಮಿಸುತ್ತಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಿಷನ್‌ ರೆಡ್ಡಿ ಅವರು, ಇಂದು ಸಂಜೆ 5 ಗಂಟೆಗೆ ಪ್ರಧಾನ್‌ ಜೊತೆ ಬೆಂಗಳೂರಿಗೆ ತಲುಪಲಿದ್ದೇನೆ. 7 ಗಂಟೆಗೆ ಹೋಟೆಲ್‌ ಕ್ಯಾಪೊಟಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಶಾಸಕರು ಮಾತ್ರವಲ್ಲದೇ ಪಕ್ಷದ ರಾಜ್ಯ ಮುಖಂಡರು ಹಾಗೂ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರ್‌ಎಸ್‌ಎಸ್‌ ಮುಖಂಡರನ್ನು ಭೇಟಿ ಮಾಡಿ ಚರ್ಚಿಸುವ‌ ಸಾಧ್ಯತೆ ಇದೆ.

× Chat with us