ದೇವಸ್ಥಾನ ತೆರೆಯಲು ಅವಕಾಶ ನೀಡಿದ ಸರ್ಕಾರ

ಮೈಸೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ತಗ್ಗಿರುವ ಹಿನ್ನೆಲೆಯಲ್ಲಿ ಅನ್‌ಲಾಕ್ ಜಾರಿಯಾಗಿದ್ದು, ಈಗ ದೇವಾಲಯಗಳೂ ಬಾಗಿಲು ತೆರೆದು ಭಕ್ತರಿಗೆ ಪ್ರವೇಶ ನೀಡಿ ದರ್ಶನ ಮತ್ತು ಆರತಿ ಸೇವೆಗೆ ಅವಕಾಶ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಎಲ್ಲಾ ದೇವಾಲಯಗಳ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದೆ.

ರಾಜ್ಯದ ದೇವಾಲಯಗಳನ್ನು ಪುನಃ ತೆರೆಯಲು ಕಡ್ಡಾಯ ಸಾರ್ವಜನಿಕ ಅಂತರ, ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ದೇವಾಲಯದ ಆಡಳಿತ ಮಂಡಳಿಯವರು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ನಿರ್ದಿಷ್ಟ ದಿನದಿಂದ ಬಾಗಿಲು ತೆರೆಯುವುದುರ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿಲ್ಲ. ಆದರೆ, ಬಾಗಿಲು ತೆರೆಯಲು ಅವಕಾಶ ಕಲ್ಪಿಸಿರುವುದಾಗಿ ಧಾರ್ಮಿಕ ದತ್ತಿ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಎಲ್.ವರಲಕ್ಷ್ಮೀ ತಿಳಿಸಿದ್ದಾರೆ.

× Chat with us