ಹೋಟೆಲ್ ವಿದ್ಯುತ್ ಬಿಲ್ ಮನ್ನಾ ಮಾಡಿದ ಸರ್ಕಾರ

ಮೈಸೂರು: ಕೋವಿಡ್-19 ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ಹೋಟೆಲ್ ಉದ್ಯಮದ ನೆರವಿಗೆ ಸರ್ಕಾರ ಧಾವಿಸಿದ್ದು, ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮತ್ತು ಮನರಂಜನಾ ಉದ್ಯಾನವನಗಳ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಿ ಆದೇಶಿಸಿದೆ.

2021ನೇ ವರ್ಷದ ಏಪ್ರಿಲ್, ಮೇ, ಜೂನ್ ತಿಂಗಳುಗಳ ವಿದ್ಯುತ್ ಬಿಲ್ ಮನ್ನಾ ಮಾಡಿದೆ. ಮಾರ್ಚ್‌ 31 ರೊಳಗೆ ವಿದ್ಯುತ್ ಬಾಕಿ ಮೊತ್ತವನ್ನು ಪಾವತಿಸಿರಬೇಕು. ಒಂದು ವೇಳೆ ಪಾವತಿಸದಿದ್ದರೆ, ಅಂತಹವರ ವಿದ್ಯುತ್ ಬಿಲ್ಲಿನ ಕನಿಷ್ಠ ಬೇಡಿಕೆ ಅಥವಾ ನಿಗದಿತ ಶುಲ್ಕವನ್ನು ಮುಂದಿನ ಮಾಹೆಯ ಬಿಲ್ಲುಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು. ವೆಬ್‌ಸೈಟ್‌ನಲ್ಲಿ ನೋಂದಣಿಯಾದ ಸದಸ್ಯರಿಗೆ ಮಾತ್ರ ಈ ಷರತ್ತು ಅನ್ವಯವಾಗಲಿದೆ. ಈ ವಿದ್ಯುತ್ ಬಿಲ್ಲಿನ ಮೊತ್ತವನ್ನು ಸರ್ಕಾರವೇ ಭರಿಸಲಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಪಾವತಿಸುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

× Chat with us