ಕರ್ನಾಟಕಕ್ಕೆ ಮತ್ತೊಂದು ಹೆಗ್ಗಳಿಕೆ: ಅತಿ ಹೆಚ್ಚು ಚಿರತೆ ಹೊಂದಿರುವ 2ನೇ ರಾಜ್ಯ

ಹೊಸದಿಲ್ಲಿ: ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಈಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ಸಂಖ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನ ಪಡೆದಿದೆ.

ಮಧ್ಯಪ್ರದೇಶ ದೇಶದಲ್ಲೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ ಒಟ್ಟು ೩,೪೨೧ ಚಿರತೆಗಳಿವೆ. ಎರಡನೇ ಕ್ರಮಾಂಕದಲ್ಲಿರುವ ಕರ್ನಾಟಕದಲ್ಲಿ ಚಿರತೆಗಳ ಸಂಖ್ಯೆ ೧,೭೮೩. ಹುಲಿ ಸಂರಕ್ಷಿತ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಕರ್ನಾಟಕದ ದಾಂಡೇಲಿ ಮತ್ತು ಅಘನಾಶಿನಿ ವ್ಯಾಘ್ರ ಆಭಯಾರಣ್ಯಗಳಲ್ಲಿ ಒಟ್ಟು ೨೨೧ ಚಿರತೆಗಳಿರುವುದು ಗಮನಾರ್ಹ.

ಮೈಸೂರು ಸಮೀಪದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳೂ ಸಹ ಉತ್ತಮ ಸಂಖ್ಯೆ ಚಿರತೆಗಳನ್ನು ಹೊಂದಿವೆ ಎಂದು ಭಾರತ ವನ್ಯಜೀವಿ ಸಂಸ್ಥೆ ತಿಳಿಸಿದೆ.

ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ವನ್ಯ ಜೀವಿಗಳ ಸಂರಕ್ಷಣೆ ಮತ್ತು ಸಂತತಿ ಅಭಿವೃದ್ಧಿ ಗಮನಾರ್ಹ ಪ್ರಗತಿಯಲ್ಲಿದೆ. ಹುಲಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿರುವುದು ಇಲ್ಲಿ ಉಲ್ಲೇಖಾರ್ಹ.

× Chat with us