ಜಾಹೀರಾತಲ್ಲಿ ತೋರಿದ್ದು ಅರಮನೆ, ವಾಸ್ತವದಲ್ಲಿ ಗುಡಿಸಲು ವಾಸ

ಹೊಸದಿಲ್ಲಿ: ಕೇಂದ್ರ ಸರ್ಕಾರ ಕೋಲ್ಕತ್ತದಲ್ಲಿ 24 ಲಕ್ಷ ರೂಪಾಯಿಗೆ ಮಹಿಳೆಯೊಬ್ಬರಿಗೆ ಮನೆ ನಿರ್ಮಿಸಿಕೊಟ್ಟಿದೆ ಎಂಬ ಜಾಹೀರಾತು ನೋಡಿ ಅದರ ಜಾಡು ಹಿಡಿದು ಹೊರಟವರಿಗೆ ಅಚ್ಚರಿಯೊಂದು ಕಾದಿತ್ತು.

ಪತ್ರಕರ್ತ ಕನ್ಹಯ್ಯ ಭೆಲಾರಿ ಅವರು ಜಾಹೀರಾತು ಇದ್ದ ಪೇಪರ್‌ ಹಿಡಿದು ಮಹಿಳೆಯನ್ನು ಹುಡುಕಿ ಹೊರಟರು. ಆದರೆ, ಆ ಮಹಿಳೆ ಇದ್ದಿದ್ದು ಕೇಂದ್ರ ಸರ್ಕಾರ ಕಟ್ಟಿಸಿಕೊಟ್ಟಿದೆ ಎನ್ನಲಾದ 24 ಲಕ್ಷ ರೂ. ಮೌಲ್ಯದ ಮನೆಯಲ್ಲಲ್ಲ. ಸ್ಲಂ ಒಂದರ ಕೋಣೆಯ ಹುಲ್ಲು ಹಾಕಿದ ಗುಡಿಸಲಿನಲ್ಲಿ. ಈ ಸಂಬಂಧದ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್‌ ಆಗಿದೆ.

ಪತ್ರಕರ್ತ ತೋರಿಸುತ್ತಿರುವುದು ಪತ್ರಿಕೆಯಲ್ಲಿ ಬಂದ ಕೇಂದ್ರ ಸರ್ಕಾರದ ಒಂದು ಜಾಹೀರಾತು. ಈ ಜಾಹೀರಾತು ಫೆಬ್ರುವರಿ 25 ರಂದು ಬಂಗಾಳದ ಎಲ್ಲಾ ಪತ್ರಿಕೆಗಳಲ್ಲಿ ಅಚ್ಚಾಗಿ ಬಂದಿತ್ತು. ಪ್ರಧಾನಿ ಮೋದಿ ಅವರ ಫೋಟೋದ ಪಕ್ಕದಲ್ಲಿರುವ ಮಹಿಳೆಯೇ ಪತ್ರಕರ್ತನ ಪಕ್ಕದಲ್ಲಿ ನಿಂತಿರುವ ಫೋಟೋ ವೈರಲ್‌ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.

ಜಾಹೀರಾತು ಪ್ರಕಾರ ಮೋದಿ ಅವರ ಫೋಟೋದ ಪಕ್ಕದಲ್ಲಿರುವ ಮಹಿಳೆಗೆ ಕೇಂದ್ರ ಸರ್ಕಾರ ಕಲ್ಕತ್ತಾದಲ್ಲಿ 24 ಲಕ್ಷ ರೂ. ಮನೆ ಕಟ್ಟಿಸಿ ಕೊಟ್ಟಿದೆ ಎಂದು ಪ್ರಚಾರವಾಗಿತ್ತು. ಆ ಮಹಿಳೆಯ ಜಾಡು ಹಿಡಿದು ಹೊರಟ ಪತ್ರಕರ್ತನಿಗೆ ನಿಜ ಸ್ಥಿತಿ ಗೊತ್ತಾದಾಗ, ಈಗ ದೇಶದ ಮುಂದೆ ವಾಸ್ತವವನ್ನು ತೆರೆದಿಟ್ಟಿದ್ದಾರೆ.

× Chat with us