ಡಾ.ಹನುಮಂತಾಚಾರ್ ಈಗ ʻಬೆಸ್ಟ್‌ ಪ್ರಿನ್ಸಿಪಾಲ್‌ʼ

ಮೈಸೂರು: ನಗರದ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್‌ ಜೋಷಿ ಅವರು ʻಉತ್ತಮ ಪ್ರಾಂಶುಪಾಲರು-2020ʼರ  ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿಕ್ಷಣ, ಸಂಶೋಧನೆ, ಕಾಳಜಿ ಹಾಗೂ ಸಮಾಜ ಸೇವೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಹನುಮಂತಾಚಾರ್ ಜೋಷಿ ಅವರನ್ಸನು ಬೆಂಗಳೂರಿನ ಸಂಶೋಧಕರ ಸಂಸ್ಥೆಯು (ಐಎನ್‌ಎಸ್‌ಸಿ) 2020ನೇ ವರ್ಷದ ಉತ್ತಮ ಪ್ರಾಂಶುಪಾಲರ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಐಎನ್‌ಎಸ್‌ಸಿ ಸಂಸ್ಥೆಯ ನಿರ್ದೇಶಕ ನಂಜೇಶ್‌ ಬೆಣ್ಣೂರು ಈಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಶಾರದಾ ವಿಲಾಸ ಕಾಲೇಜಿನ ಪ್ರಾಂಶುಪಾಲ ಹಾಗೂ ಪ್ರಾಧ್ಯಾಪಕರು ಆಗಿರುವ ಹನುಮಂತಾಚಾರ್‌ ಜೋಷಿ ಅವರು ಶೋಷಿತ ಸಮುದಾಯಗಳು, ಸಾಮಾಜಿಕ ಕಾರ್ಯ ಹಾಗೂ ಅನ್ವೇಷಣೆಗೆ ಸಂಬಂಧಿಸಿದಂತೆ  ಸುಮಾರು 217 ಸಂಶೋಧನಾ ಪ್ರಬಂಧಗಳನ್ನು ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. 37ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದು, 153ಕ್ಕೂ ಹೆಚ್ಚು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಷಯ ಮಂಡನೆ ಮಾಡಿದ್ದಾರೆ.

× Chat with us