ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.
ಜಾ.ದಳ ನಾಯಕರಾದ ಹೆಚ್ಡಿ ಕುಮಾರಸ್ವಾಮಿ, ಹೆಚ್ಡಿ ರೇವಣ್ಣ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಪತ್ರಿಕಾಗೋಷ್ಠಿ ನಡೆಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಬಹಳ ಕುತೂಹಲ ಮೂಡಿಸಿದ್ದ ಹಾಸನ ಕ್ಷೇತ್ರದ ಟಿಕೆಟ್ ಹೆಚ್.ಪಿ. ಸ್ವರೂಪ್ ಪಾಲಾಗಿದೆ.
ಭವಾನಿ ರೇವಣ್ಣಗೆ ಟಿಕೆಟ್ ಕೈತಪ್ಪಿದೆ. ಇದರ ಬೆನ್ನಲ್ಲೇ ಹಾಸನದ ಹೆಚ್.ಪಿ.ಸ್ವರೂಪ್ ನಿವಾಸದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಬೆಂಬಲಿಗರು ಸ್ವರೂಪ್ರನ್ನು ಹೆಗಲ ಮೇಲೆ ಹೊತ್ತು ಕುಣಿದು ಸಂಭ್ರಮಿಸಿದರು. ಈ ಮಧ್ಯೆ, ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ಟಿಕೆಟ್ ವೈಎಸ್ವಿ ದತ್ತಾಗೆ ದೊರೆತಿದೆ.
ಸ್ವರೂಪ್‌ಗೆ ಟಿಕೆಟ್: ರೇವಣ್ಣ ಹೇಳಿದ್ದೇನು: ಹಾಸನ ಕ್ಷೇತ್ರದ ಟಿಕೆಟ್ ಸ್ವರೂಪ್ ಪಾಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಡಿ ರೇವಣ್ಣ, ಹಾಸನ ಕ್ಷೇತ್ರದಲ್ಲಿ ಭವಾನಿಯನ್ನು ಕಣಕ್ಕಿಳಿಸಬೇಕೆಂದು ಹೇಳುತ್ತಿದ್ದೆ. ಕಳೆದ 2 ವರ್ಷಗಳಿಂದ ಭವಾನಿ ನಿಲ್ಲಿಸಬೇಕೆಂದು ಚರ್ಚೆ ನಡೆಯುತ್ತಿತ್ತು. ಪ್ರೀತಂಗೌಡ 50,000 ಮತಗಳ ಅಂತರದಿಂದ ಗೆಲ್ಲುವೆ ಅಂತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಭವಾನಿ ಕಣಕ್ಕಿಳಿಸಲು ನಿರ್ಧರಿಸಿದ್ದೆವು. ಆದರೆ ಹಾಸನದ ಶಾಸಕರು, ಕಾರ್ಯಕರ್ತರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ನಮ್ಮ ಮಾವ ಮುಖ್ಯ, ನನಗೆ ಯಾವುದೇ ಶಾಸಕ ಸ್ಥಾನ ಮುಖ್ಯವಲ್ಲ ಎಂದು ಕಳೆದ ಒಂದು ತಿಂಗಳಿಂದ ಭವಾನಿ ರೇವಣ್ಣ ಹೇಳುತ್ತಲೇ ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ರೇವಣ್ಣ ಹೇಳಿದರು.
ಪ್ರಾಮಾಣಿಕ ರಾಜಕಾರಣಿ ದತ್ತ: ರೇವಣ್ಣ ಶ್ಲಾಘನೆ: ಪ್ರಾಮಾಣಿಕ ರಾಜಕಾರಣಿ ದತ್ತಾರನ್ನು ಕಾಂಗ್ರೆಸ್ನವರು ಕರೆದೊಯ್ದಿದ್ದರು. ಅರ್ಧದಾರಿಯಲ್ಲಿ ವೈಎಸ್ವಿ ದತ್ತಾರನ್ನು ಕಾಂಗ್ರೆಸ್ ನಾಯಕರು ಕೈಬಿಟ್ಟಿದ್ದರು. ಕಳೆದ ಹಲವು ವರ್ಷಗಳಿಂದ ದತ್ತಾ ನಮ್ಮ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ರೇವಣ್ಣ ಮೆಚ್ಚುಗೆಯ ಮಾತುಗಳನ್ನಾಡಿದರು.
ಕಾಂಗ್ರೆಸ್ ಸೇರಿ ಮತ್ತೆ ಜೆಡಿಎಸ್ಗೆ ಮರಳಿರುವ ವೈಎಸ್ವಿ ದತ್ತಾಗೆ ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ. ಕಡೂರು ಕ್ಷೇತ್ರದಿಂದ ಈಗಾಗಲೇ ಜೆಡಿಎಸ್ ಟಿಕೆಟ್ ಪಡೆದಿರುವ ಧನಂಜಯ್ ಅವರು ದತ್ತಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ವೇಳೆ ಎಲ್ಲ ಗೊಂದಲ ಬಗೆಹರಿಯಲಿದೆ ಎಂದಿದ್ದರು.
ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ಸೇರಿದರು.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್
ಕ್ಷೇತ್ರ – ಅಭ್ಯರ್ಥಿ
ಹಾಸನ – ಹೆಚ್ಪಿ ಸ್ವರೂಪ್
ಕುಡಚಿ – ಆನಂದ ಮಾಳಗಿ
ಸವದತ್ತಿ ಯಲ್ಲಮ್ಮ – ಸೌರಬ್ ಆನಂದ್ ಚೋಪ್ರಾ
ಆಥಣಿ – ಶಶಿಕಾಂತ್ ಪಡಸಲಗಿ
ಸವದತ್ತಿ – ಸೌರಬ್ ಆನಂದ್ ಚೋಪ್ರಾ
ಅಥಣಿ – ಶಶಿಕಾಂತ್ ಪಡಸಲಗಿ
ಯಲ್ಲಾಪುರ – ಡಾ.ನಾಗೇಶ್ ನಾಯ್ಕ್
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ – ಕಡಬೂರು ಮಂಜುನಾಥ್
ಯಲಹಂಕ – ಮುನೇಗೌಡ
ಯಶವಂತಪುರ – ಜವರಾಯಿಗೌಡ
ತಿಪಟೂರು – ಶಾಂತಕುಮಾರ್
ಶಿರಾ – ಆರ್.ಉಗ್ರೇಶ್
ಹಾನಗಲ್ – ಮನೋಹರ ತಹಶೀಲ್ದಾರ್
ಸಿಂದಗಿ – ವಿಶಾಲಾಕ್ಷಿ ಶಿವಾನಂದ್
ಗಂಗಾವತಿ – ಹೆಚ್.ಆರ್.ಚನ್ನಕೇಶವ
ಜೇವರ್ಗಿ – ದೊಡ್ಡಪ್ಪಗೌಡ
ಶಹಾಪುರ – ಗುರುಲಿಂಗಪ್ಪಗೌಡ
ಕಡೂರು – ವೈಎಸ್ವಿ ದತ್ತಾ
ಹೊಳೆನರಸೀಪುರ – ಹೆಚ್.ಡಿ.ರೇವಣ್ಣ
ಸಕಲೇಶಪುರ – ಹೆಚ್.ಕೆ.ಕುಮಾರಸ್ವಾಮಿ
ಅರಕಲಗೂಡು – ಎ.ಮಂಜು
ಶ್ರವಣಬೆಳಗೊಳ – ಬಾಲಕೃಷ್ಣ
ಮಹಾಲಕ್ಷ್ಮೀ ಲೇಔಟ್ – ರಾಜಣ್ಣ
ಮಾಯಕೊಂಡ – ಆನಂದಪ್ಪ
ಹುಬ್ಬಳ್ಳಿ ಪೂರ್ವ – ವೀರಭದ್ರಪ್ಪಯ್ಯ
ಕುಮಟ – ಸೂರಜ್ ಸೋನಿ ನಾಯಕ್
ಹಳಿಯಾಳ – ಎಸ್ ಎಲ್ ಘೋಟ್ನೆಸ್ಕರ್
ಭಟ್ಕಳ – ನಾಗೇಂದ್ರ ನಾಯಕ್
ಶಿರಸಿ – ಉಪೇಂದ್ರ ಪೈ
ಚಿತ್ತಪುರ – ನ್ಯಾಯದೀಶ ಸುಭಾಷ್ ಚಂದ್ರ ರಾಥೋಡ್
ಕಲಬುರಗಿ ಉತ್ತರ – ನಾಸೀರ್ ಹುಸೇನ್
ಬಳ್ಳಾರಿ – ಅಲ್ಲಬಕ್ಸ್ ಮುನ್ನ
ಹರಪ್ಪನ ಹಳ್ಳಿ – ನೂರ್ ಅಹಮದ್
ಕೊಳ್ಳೆಗಾಲ – ನಿವೃತ್ತ ಪೊಲೀಸ್ ಪುಟ್ಟ ಸ್ವಾಮಿ
ಗುಂಡ್ಲುಪೇಟೆ – ಕಡಬುರು ಮಂಜುನಾಥ್
ಕಾರ್ಕಳ – ಶ್ರೀಕಾಂತ್ ಕೊಚ್ಚುರ್
ಉಡುಪಿ – ದಕ್ಷತ್ವ ಆರ್ ಶೆಟ್ಟಿ
ಕುಂದಾಪುರ – ರಮೇಶ್ ಕುಂದಾಪುರ
ಕನಕಪುರ – ನಾಗರಾಜ್ಯ
ಲಹಂಕ – ಮುನೇಗೌಡ
ಯಶವಂತಪುರ – ಜವರಾಯಿಗೌಡ
ತಿಪಟೂರು – ಶಾಂತ ಕುಮಾರ್ಶಿ
ರಾ – ಆರ್ ಉಗ್ರೇಶ್
ಹಾನಗಲ್ – ನೋಹರ್ ತಹಶಿಲ್ದಾರ್
ಸಿಂದಗಿ – ವಿಶಾಲಕ್ಷಿ ಶಿವಾನಂದ್
ಹೆಚ್ ಡಿ ಕೋಟೆ – ಜಯಪ್ರಕಾಶ್
ಕಾರವಾರ – ಚೈತ್ರಾ ಕೋಟಾಕರ್
ಪುತ್ತೂರು – ದಿವ್ಯಾ ಪ್ರಭ
ಅರಕಲಗೂಡು – ಎ ಮಂಜು
ಸಕಲೇಶಪುರ – ಹೆಚ್ ಕೆ ಕುಮಾರಸ್ವಾಮಿ
ಮಹಾಲಕ್ಷ್ಮಿ ಲೇಔಟ್ – ರಾಜಣ್ಣ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…