BREAKING NEWS

ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್

ಬೆಂಗಳೂರು – ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆಗೆ 59 ಅಭ್ಯರ್ಥಿಗಳ ಜೆಡಿಎಸ್ 3ನೇ ಪಟ್ಟಿ ಬಿಡುಗಡೆಯಾಗಿದ್ದು, ವಲಸರಿಗೆ ಟಿಕೆಟ್ ನೀಡಿ ಮಣೆ ಹಾಕಲಾಗಿದೆ.ಮೇಲ್ಮನೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಬೆನ್ನಲ್ಲೇ ಮಾಜಿ ಸಂಸದ ಆಯನೂರು ಮಂಜುನಾಥ್ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ​ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ವರುಣಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಭಾರತಿ ಶಂಕರ್ ಎಂದು ಘೋಷಣೆ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಎನ್.ಆರ್.ಸಂತೋಷ್ ಅವರಿಗೆ ಅರಸೀಕೆರೆ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಬಹುತೇಕ ಎಲ್ಲರಿಗೂ ಟಿಕೆಟ್ ನೀಡಲಾಗಿದೆ. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ಬದಲಾವಣೆಗೊಂಡಿದ್ದಾರೆ.

ಘೋಷಣೆಯಾಗಿದ್ದ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗಿದ್ದು, ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವ ನಾರಾಯಣ ಅವರಿಗೆ ಬೆಂಬಲ ಘೋಷಿಸಲಾಗಿದೆ. ಮೂರು ಕ್ಷೇತ್ರಗಳಲ್ಲಿ ಆರ್‍ ಪಿಐ ಹಾಗೂ ಮೂರು ಕ್ಷೇತ್ರಗಳಲ್ಲಿ ಸಿಪಿಐಎಂಗೆ ಬಾಹ್ಯ ಬೆಂಬಲ ಘೋಷಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ​ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ಭಾರತಿ ಶಂಕರ್ ಅವರನ್ನು ಘೋಷಿಸಲಾಗಿದೆ.
ಇನ್ನು ಮಂಡ್ಯದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆ. ಸ್ವತಃ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೇ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಹಾಲಿ ಶಾಸಕ ಎಂ ಶ್ರೀನಿವಾಸ್ ಬದಲಿಗೆ ಮನ್ಮುಲ್ ಅಧ್ಯಕ್ಷ ರಾಮಚಂದ್ರ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಮೇಲೆ ಕಿರುಕುಳದ ಆರೋಪ ಮಾಡಿದ ಮಹಿಳೆ
ಬಿಜೆಪಿಗೆ ರಾಜೀನಾಮೆ ನೀಡಿರುವ ಆಯನೂರು ಮಂಜುನಾಥ್ ಅವರಿಗೆ ಶಿವಮೊಗ್ಗ ನಗರದಿಂದ ಟಿಕೆಟ್ ಸಿಕ್ಕಿದ್ದರೆ, ಎನ್.ಆರ್ ಸಂತೋಷ್‌ಗೆ ಅರಸೀಕೆರೆ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ಇನ್ನು ಕಾಂಗ್ರೆಸ್‌ನಿಂದ ಬಂದಿರುವ ಮಾಜಿ ಎಂಎಲ್‌ಸಿ ರಘು ಆಚಾರ್‌ಗೆ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಬಾಹ್ಯ ಬೆಂಬಲ ಕೊಟ್ಟ ಕ್ಷೇತ್ರಗಳು

ನಂಜನಗೂಡು – ದರ್ಶನ್‌ ಧ್ರುವನಾರಾಯಣ
ಗುಲ್ಬರ್ಗ ಗ್ರಾಮಾಂತರ – ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಬಾಗೇಪಲ್ಲಿ- ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಕೆಆರ್.ಪುರಂ- ಸಿಪಿಐಎಂ ಅಭ್ಯರ್ಥಿಗೆ ಬೆಂಬಲ
ಸಿವಿ ರಾಮನ್‌ನಗರ – ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
ವಿಜಯನಗರ – ಆರ್‌ಪಿಐ ಅಭ್ಯರ್ಥಿಗೆ ಬೆಂಬಲ
ಮಹದೇವಪುರ – ಆರ್‌ಪಿಐ ಅಭ್ಯರ್ಥಿಗೆ ಬೆಂಬಲ

ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರಿಗೆ ಜೆಡಿ ಎಸ್ ಬೆಂಬಲ ನೀಡದೆ. ದರ್ಶನ್ ತಂದೆ ಹಾಗೂ ತಾಯಿ ಇಬ್ಬರನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಅವರಿಗೆ ಬೆಂಬಲ ನೀಡಲು ಜೆಡಿಎಸ್ ತೀರ್ಮಾನ ಮಾಡಿದೆ.
ಚಿತ್ರದುರ್ಗದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರಿದ್ದ ರಘು ಆಚಾರ್ ಗೆ ಟಿಕೆಟ್ ನೀಡಲಾಗಿದೆ. ರಘು ಆಚಾರ್ ಅವರಿಗೆ ಈಗಾಗಲೇ ಬಿಫಾರಂ ನೀಡಲಾಗಿದ್ದು, ನಾಮಪತ್ರ ಸಲ್ಲಿಕೆಯನ್ನೂ ಮಾಡಿದ್ದಾರೆ.
ಚಿಕ್ಕಪೇಟೆಯಲ್ಲಿ ಇಮ್ರಾನ್ ಪಾಶಾಗೆ ಟಿಕೆಟ್ ನೀಡಲಾಗಿದೆ.
ಚಿಕ್ಕಪೇಟೆಯಲ್ಲಿ ಇಮ್ರಾನ್ ಪಾಶಾಗೆ ಜೆಡಿಎಸ್ ಟಿಕೆಟ್ ‌ನೀಡಿದೆ. ಇಮ್ರಾನ್ ಪಾಶಾ ಚಾಮರಾಜಪೇಟೆ ಟಿಕೆಟ್ ಪ್ರಯತ್ನ ನಡೆಸಿದ್ದರು. ಕಳೆದ ಬಾರಿ ಇಮ್ರಾನ್ ಪಾಶಾಗೆ ಚಾಮರಾಜಪೇಟೆಯಲ್ಲಿ ಟಿಕೆಟ್ ನೀಡಲಾಗಿತ್ತು. ಆದರೆ ಈ‌ ಬಾರಿ ಅವರಿಗೆ ಚಿಕ್ಕಪೇಟೆಯಲ್ಲಿ ಟಿಕೆಟ್ ನೀಡಲಾಗಿದೆ.

ಈಗಾಗಲೇ 1ನೇ ಹಾಗೂ 2ನೇ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದ 12 ಅಭ್ಯರ್ಥಿಗಳನ್ನು ಕೊನೇ ಕ್ಷಣದಲ್ಲಿ ಬದಲಾವಣೆ ಮಾಡಿದ್ದಾರೆ. ಇನ್ನು ಈ ಎಲ್ಲ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿರುವುದು ಗೆಲ್ಲುವ ಉದ್ದೇಶದಿಂದಲೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದಕ್ಕೂ ಮೊದಲು ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿ 93 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಇದೀಗ ಮಂಡ್ಯ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಹುಕ್ಕೇರಿ ಸೇರಿದಂತೆ 59 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದೆ

ಬದಲಾವಣೆಯಾದ ಕ್ಷೇತ್ರಗಳು
ಬಸವನ ಬಾಗೇವಾಡಿ – ಸೋಮನಗೌಡ ಪಾಟೀಲ್ (ಪರಮಾನಂದ ಬಸಪ್ಪ ತನಿಖೆದಾರ್)
ಬಸವಕಲ್ಯಾಣ- ಸಂಜಯ್‌ ವಾಡೇಕರ್ (ಸೈಯದ್‌ ಯಶ್ರಬ್‌ ಅಲಿ ಖಾದ್ರಿ)
ಬೀದರ್- ಸೂರ್ಯಕಾಂತ ನಾಗಮಾರಪಲ್ಲಿ (ರಮೇಶ್‌ ಪಾಟೀಲ ಸೊಲ್ಲಾಪುರ)
ಕುಷ್ಟಗಿ – ಶರಣಪ್ಪ ಕುಂಬಾರ (ತುಕಾರಾಂ ಸುರ್ವೆ)
ಹಗರಿಬೊಮ್ಮನಹಳ್ಳಿ – ನೇಮಿರಾಜನಾಯ್ಕ್ (ಪರಮೇಶ್ವರ)
ಬಳ್ಳಾರಿ ನಗರ – ಅನಿಲ್‌ ಲಾಡ್ (ಅಲ್ಲಾಭಕ್ಷಾ ಮುನ್ನಾ)
ಚನ್ನಗಿರಿ – ತೇಜಸ್ವಿ ಪಟೇಲ್ (ಎಂ. ಯೋಗೇಶ್)
ಮೂಡಿಗೆರೆ (ಎಸ್‌ಸಿ)- ಎಂ.ಪಿ. ಕುಮಾರಸ್ವಾಮಿ (ಬಿ.ಬಿ. ನಿಂಗಯ್ಯ)
ರಾಜಾಜಿನಗರ – ಡಾ.ಆಂಜನಪ್ಪ (ಗಂಗಾಧರ ಮೂರ್ತಿ)
ಬೆಂಗಳೂರು (ದಕ್ಷಿಣ)- ರಾಜಗೋಪಾಲರೆಡ್ಡಿ (ಆರ್. ಫ್ರಭಾಕರ ರೆಡ್ಡಿ)
ಮಂಡ್ಯ – ಬಿ.ಆರ್. ರಾಮಚಂದ್ರ (ಎಂ. ಶ್ರೀನಿವಾಸ್)
ವರುಣ – ಡಾ. ಭಾರತಿ ಶಂಕರ್ (ಅಭಿಷೇಕ್

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಅಭ್ಯರ್ಥಿ _ ಕ್ಷೇತ್ರ
ನಿಪ್ಪಾಣಿ – ರಾಜು ಮಾರುತಿ ಪವಾರ್​
ಚಿಕ್ಕೋಡಿ _ ಸದಾಶಿವ ವಾಳಕೆ
ಕಾಗವಾಡ _ ಮಲ್ಲಪ್ಪ ಎಂ ಚುಂಗ
ಹುಕ್ಕೇರಿ _ ಬಸವರಾಜಗೌಡ ಪಾಟೀಲ್​
ಅರಭಾವಿ _ ಪ್ರಕಾಶ ಕಾಸಶೆಟ್ಟಿ
ಶಿವಮೊಗ್ಗ _ ನಗರ ಆಯನೂರು ಮಂಜುನಾಥ್
ಯಮಕನಮರಡಿ _ ಮಾರುತಿ ಮಲ್ಲಪ್ಪ ಅಷ್ಟಗಿ
ಬೆಳಗಾವಿ ಉತ್ತರ _ಶಿವಾನಂದ ಮುಗಲಿಹಾಳ್​
ಬೆಳಗಾವಿ ದಕ್ಷಿಣ ಕ್ಷೇತ್ರ _ ಶ್ರೀನಿವಾಸ್​ ತೋಳಲ್ಕರ್
ಬೆಳಗಾವಿ ಗ್ರಾಮೀಣ _ ಶಂಕರಗೌಡ ರುದ್ರಗೌಡ ಪಾಟೀಲ್
ರಾಮದುರ್ಗ _ ಪ್ರಕಾಶ್​​ ಮುಧೋಳ
ಮುಧೋಳ _ ಧರ್ಮರಾಜ ವಿಠಲ್ ದೊಡ್ಮನಿ
ತೇರದಾಳ _ ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ _ ಯಾಕೂಬ್ ಬಾಬಾಲಾಲ್
ಬೀಳಗಿ _ ರುಕ್ಮುದ್ದೀನ್ ಸೌದುಗರ್
ಬಾಗಲಕೋಟೆ _ ದೇವರಾಜ್ ಪಾಟೀಲ್
ಹುನಗುಂದ _ ಶಿವಪ್ಪ ಮಾದೇವಪ್ಪ ಮನಗುಂದಿ
ವಿಜಯಪುರ ನಗರ _ ಬಂಡೆ ನವಾಜ್
ಸುರಪುರ _ ಶ್ರವಣ್‌ಕುಮಾರ್ ನಾಯಕ್
ಕಲಬುರಗಿ _ ಕೃಷ್ಣಾರೆಡ್ಡಿ
ಔರಾದ್ _ ಜಯಸಿಂಗ್ ರಾಥೋಡ್
ರಾಯಚೂರು ನಗರ _ ವಿನಯಕುಮಾರ್
ಮಸ್ಕಿ _ ರಾಘವೇಂದ್ರ ನಾಯಕ
ಕನಕಗಿರಿ _ ರಾಜಗೋಪಾಲ್
ಯಲಬುರ್ಗಾ _ ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ _ ಚಂದ್ರಶೇಖರ್
ಶಿರಹಟ್ಟಿ _ ರುದ್ರಗೌಡ
ನವಲಗುಂದ _ ಕಲ್ಲಪ್ಪ ನಾಗಪ್ಪ ರೆಡ್ಡಿ
ಕುಂದಗೋಳ _ ಹಜರತ್ ಅಲಿ ಅಲ್ಲಾಸಾಬ್
ಧಾರವಾಡ _ ಮಂಜುನಾಥ್ ಲಕ್ಷ್ಮಣ್
ಹುಬ್ಬಳ್ಳಿ-ಧಾರವಾಡ (ಕೇಂದ್ರ) _ ಸಿದ್ದಲಿಂಗೇಶ್ ಗೌಡ
ಹುಬ್ಬಳ್ಳಿ-ಧಾರವಾಡ _ ಗುರುರಾಜ ಹುಣಸಿಮರದ
ಕಲಘಟಗಿ _ ವೀರಪ್ಪ ಬಸಪ್ಪ ಶೀಗೆಹಟ್ಟಿ
ಹಾವೇರಿ _ ತುಕಾರಾಂ ಮಾಳಗಿ
ಬ್ಯಾಡಗಿ _ ಸುನೀತಾ ಎಂ ಪೂಜಾರ್
ಕೂಡ್ಲಿಗಿ _ ಕೋಡಿಹಳ್ಳಿ ಭೀಮಪ್ಪ
ಚಿತ್ರದುರ್ಗ – ರಘು ಆಚಾರ್
ಹೊಳಲ್ಕೆರೆ _ ಇಂದ್ರಜಿತ್ ನಾಯ್ಕ್
ಜಗಳೂರು _ ದೇವರಾಜ್
ಶಿವಮೊಗ್ಗ ನಗರ _ ಆಯನೂರು ಮಂಜುನಾಥ್
ಸೊರಬ _ ಬಾಸೂರು ಚಂದ್ರೇಗೌಡ
ಸಾಗರ _ ಕಿಶೋರ್
ರಾಜರಾಜೇಶ್ವರಿ ನಗರ _ ಡಾ. ನಾರಾಯಣಸ್ವಾಮಿ
ಮಲ್ಲೇಶ್ವರಂ _ ಉತ್ಕರ್ಷ
ಚಾಮರಾಜಪೇಟೆ _ ಗೋವಿಂದರಾಜು
ಚಿಕ್ಕಪೇಟೆ _ ಇಮ್ರಾನ್ ಪಾಷಾ
ಪದ್ಮನಾಭನಗರ _ ಬಿ ಮಂಜುನಾಥ್
ಬಿಟಿಎಂ ಲೇಔಟ್ _ ವೆಂಕಟೇಶ್
ಜಯನಗರ _ ಕಾಳೇಗೌಡ
ಮೊಮ್ಮನಹಳ್ಳಿ _ ನಾರಾಯಣರಾಜು
ಅರಸೀಕೆರೆ _ ಎನ್ ಆರ್ ಸಂತೋಷ್
ಮೂಡಬಿದಿರೆ _ ಅಮರಶ್ರೀ
ಸುಳ್ಯ _ ವೆಂಕಟೇಶ್ ಎಚ್. ಎನ್
ವಿರಾಜಪೇಟೆ _ ಮನ್ಸೂರ್ ಅಲಿ
ಚಾಮರಾಜ _ ಎಚ್ ಕೆ ರಮೇಶ್
ನರಸಿಂಹರಾಜ _ ಅಬ್ದುಲ್ ಖಾದರ್ ಶಾಹಿದ್
ಚಾಮರಾಜನಗರ _ ಮಲ್ಲಿಕಾರ್ಜುನ್ ಸ್ವಾಮಿ

lokesh

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

56 seconds ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

10 mins ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

45 mins ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

60 mins ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

1 hour ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

1 hour ago