ಶ್ರೀನಗರ : ” ಸದ್ಯ ಆಡಳಿತಾರೂಢ ಸರಕಾರವು ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿಯೆತ್ತುತ್ತಿದೆ. ಆದರೆ ಆ ರೀತಿಯಾಗಿ ಕಣಿವೆ ಪ್ರದೇಶ ಭಾರತದಲ್ಲಿ ಉಳಿಯಲು ಮಹಾತ್ಮ ಗಾಂಧೀಜಿ ಕಾರಣ,” ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಹಿಂದೂಗಳು ಬಹುಸಂಖ್ಯಾತರಾಗಿರುವ ರಾಷ್ಟ್ರದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ರಾಜ್ಯವೆಂದರೆ , ಅದು ಜಮ್ಮು ಮತ್ತು ಕಾಶ್ಮೀರ. ಸ್ವಾತಂತ್ರ್ಯ ಸಿಕ್ಕ ನಂತರ ಮಹಾತ್ಮ ಗಾಂಧೀಜಿ ಅವರು ಈ ದೇಶದಲ್ಲಿ ವ್ಯಕ್ತಿಯು ಯಾವುದೇ ಧರ್ಮ, ಭಾಷೆ, ಸಂಸ್ಕೃತಿ ಪಾಲಿಸಿದರೂ ಅವರೆಲ್ಲರೂ ಭಾರತೀಯರು. ಆ ಬಗ್ಗೆ ಸಂಶಯವೇ ಇಲ್ಲ ಎಂದು ಘೋಷಿಸಿದರು. ಈ ವಾಗ್ದಾನವು ಕಣಿವೆಯಲ್ಲಿನ ಮುಸ್ಲಿಮರು ಭಾರತದಲ್ಲಿ ಉಳಿಯುವಂತೆ ಮಾಡಿತು,” ಎಂದು ವಿವರಿಸಿದರು.
” ಎಲ್ಲ ರಾಜ್ಯಗಳಿಂದ ಈ ದೇಶ ರಚಿತವಾಗಿದೆ ಎಂಬ ಮಹಾತ್ಮ ಗಾಂಧಿ ಅವರ ಉದಾತ್ತ ಚಿಂತನೆಗೆ ಗೌರವವಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಪ್ರತ್ಯೇಕ ರಾಜ್ಯ ಅಥವಾ ಅನ್ಯ ರಾಷ್ಟ್ರದೊಂದಿಗೆ ಗುರುತಿಸಿಕೊಳ್ಳುವ ಯತ್ನ ನಡೆಸಿಲ್ಲ,” ಎಂದು ಫಾರೂಕ್ ಅಭಿಪ್ರಾಯಪಟ್ಟರು.
“ಕಾಶ್ಮೀರ ಎಂದಿಗೂ ಸ್ವಾತಂತ್ರ್ಯ ಕೇಳಿಲ್ಲ. ನಾವು ದೇಶದ ಭಾಗವಾಗಿದ್ದೇವೆ. ಸ್ವಾತಂತ್ರ್ಯ ಬಂದ ಸಂದರ್ಭದಿಂದಲೂ ಕ್ಷೋಭೆ ಇದೆ. ದಿಲ್ಲಿ ತನ್ನ ಆಟ ಆಡಿದೆ ಮತ್ತು ತನ್ನ ಆಟವನ್ನು ಮುಂದುವರಿದಿದೆ. ನೆಹರು ಕಾಲದಲ್ಲಿಯೂ ಹಾಗೆ ಇತ್ತು, ಈಗ ಕೂಡ ಅದು ಹಾಗೆಯೇ ಇದೆ” ಎಂದು ಹೇಳಿದರು.
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…