ಚಿಕ್ಕೋಡಿ : ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಎಫ್‌ಐಆರ್ ಮೂಲಕ ಜೈನಮುನಿಯ ಕೊಲೆ ರಹಸ್ಯ ಬಯಲಾಗಿದೆ.
ಕರೆಂಟ್ ಶಾಕ್ ನೀಡಿ ಸ್ವಾಮೀಜಿಯ ಹತ್ಯೆಗೈದ ಹಂತಕರು ಬಳಿಕ ಅವರ ದೇಹವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಎಸೆದಿದ್ದರು. ಕೊಲೆ ಮಾಡಿದ್ದು ನಾರಾಯಣ ಮಾಳಿ ಮಾತ್ರ ಎಂದು ಬಿಂಬಿಸುವ ಕಾರ್ಯ ನಡೆದಿತ್ತು. ಆದರೆ ಸದ್ಯ ಹಸನ್ ಡಾಲಾಯತ್ ಹಾಗೂ ನಾರಾಯಣ ಮಾಳಿ ಇಬ್ಬರು ಸೇರಿ ಜೈನಮುನಿಯ ಹತ್ಯೆ ಮಾಡಿದ್ದಾರೆ ಎಂಬ ಸ್ಫೋಟಕ ಸುದ್ದಿ ಎಫ್‌ಐಆರ್ ಮೂಲಕ ಬಹಿರಂಗವಾಗಿದೆ. ಕರೆಂಟ್ ಶಾಕ್ ಕೊಟ್ಟರೂ ಸ್ವಾಮೀಜಿ ಪ್ರಾಣ ಪಕ್ಷಿ ಹಾರಿ ಹೋಗಿರಲಿಲ್ಲ. ಕರೆಂಟ್ ಶಾಕ್ ಕೊಟ್ಟು ಚಿತ್ರ ಹಿಂಸೆ ನೀಡಿದ ನಂತರ ಸ್ವಾಮೀಜಿಯ ಟವೆಲ್‌ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಹಣ ವಾಪಸ್ ನೀಡುವಂತೆ ಪದೇ ಪದೇ ಸ್ವಾಮೀಜಿ ಪೀಡಿಸುತ್ತಿದ್ದು, ಇದರಿಂದ ಕೋಪಗೊಂಡ ನಾರಾಯಣ ಮಾಳಿ ತನ್ನ ಸ್ನೇಹಿತ ಹಸನ್ ಡಾಲಾಯತ್ ಜೊತೆ ಸೇರಿ ಕೊಲೆ ಮಾಡಿದ್ದಾನೆ. ಕೋಣೆಯಲ್ಲಿ ಜೈನ ಮುನಿಗೆ ಮೊದಲು ಕರೆಂಟ್ ಶಾಕ್ ನೀಡಿ ಚಿತ್ರ ಹಿಂಸೆ ನೀಡಿದ್ದು, ಬಳಿಕ ಕೊಲೆ ಮಾಡಿ ಗೋಣಿ ಚೀಲದಲ್ಲಿ ಶವ ಸಾಗಿಸಿದ್ದಾರೆ.
ಹೀರೆಕುಡಿಯಿಂದ ಖಟಕಬಾವಿಯವರೆಗೂ ಬೈಕ್ ಮೇಲೆ ಶವ ಸಾಗಾಟ ಮಾಡಿ ಖಟಕಬಾವಿಯ ಕೊಳವೆ ಬಾವಿ ಬಳಿ ದೇಹ ಪೀಸ್ ಪೀಸ್ ಮಾಡಿದ್ದಾರೆ. ನಂತರ ಕೊಳವೆ ಬಾವಿಯಲ್ಲಿ ಶವ ಎಸೆದು ಹೋಗಿರುವ ವಿಚಾರ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…