ಕಾವೇರಿ ಕೂಗು| 1.10 ಕೋಟಿ ಸಸಿಗಳನ್ನು ರೈತರ ಜಮೀನಿನಲ್ಲಿ ನೆಡಲಾಗಿದೆ: ಜಗ್ಗಿ ವಾಸುದೇವ್

ಮೈಸೂರು: ‌ʻಕಾವೇರಿ ಕೂಗುʼ ಅಭಿಯಾನದಡಿ ಈಗಾಗಲೇ 1.10 ಕೋಟಿ ಸಸಿಗಳನ್ನು ರೈತರ ಜಮೀನಿನಲ್ಲಿ ನೆಡಲಾಗಿದೆ ಎಂದು ಈಶಾ ಪ್ರತಿಷ್ಠಾನದ ಜಗ್ಗಿ ವಾಸುದೇವ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಕಾವೇರಿ ಕೂಗುʼ ಅಭಿಯಾನಕ್ಕೆ ಸ್ವಯಂ ಸೇವಕರು, ರೈತರು ಬಹಳ ಉತ್ಸಾಹದಿಂದ ಭಾಗವಹಿಸಿದ್ದಾರೆ. ಸಸಿ ನೆಡುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.

ಕೊಯಮತ್ತೂರಿನಿಂದ ಮೈಸೂರಿಗೆ ಬೈಕ್‌ನಲ್ಲೇ ಬಂದಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಹೌದು.. ಬೈಕ್‌ನಲ್ಲೇ ಬಂದೆ. ಕೋವಿಡ್‌ ಸಂದರ್ಭದಲ್ಲಿ ಸಾರ್ವಜನಿಕ ಅಂತರ ಕಾಯ್ದುಕೊಳ್ಳಬೇಕಲ್ಲ ಎಂದರು.

ಇದಕ್ಕೂ ಮುನ್ನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಜಗ್ಗಿ ವಾಸುದೇವ್‌ ಭೇಟಿಯಾದರು.

× Chat with us