ಉಗ್ರ ಸಂಘಟನೆಗೆ ಆರ್‌ಎಸ್‌ಎಸ್‌ ಹೋಲಿಸಿದ್ದು ತಪ್ಪು: ಕೆ.ಶಿವರಾಂ!

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ ಉಗ್ರ ಸಂಘಟನೆಗೆ ಹೋಲಿಸಿರುವುದು ಸರಿಯಲ್ಲ. ತಮ್ಮ ಹೇಳಿಕೆ ವಾಪಸ್ ಪಡೆಯದಿದ್ದರೇ ಅವರು ಹೋದ ಕಡೆಯಲ್ಲೆಲ್ಲಾ ವಿರೋಧ ಎದುರಿಸಬೇಕಾಗುತ್ತದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಕೆ.ಶಿವರಾಂ ಹೇಳಿದರು.

ಚಾಮರಾಜನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವೇಳೆಯೂ ಬಹಳ ಸಮತೋಲನದಿಂದ ಮಾತನಾಡುವ ಧ್ರುವನಾರಾಯಣ ಅವರ ಬಾಯಲ್ಲಿ ಈ ಮಾತನ್ನು ನಿರೀಕ್ಷಿಸಿರಲಿಲ್ಲ. ದೇಶದಲ್ಲಿ ಹಿಂದುತ್ವ ಎಂಬುದು ಉಳಿದಿದ್ದರೆ ಅದು ಆರ್‌ಎಸ್‌ಎಸ್‌ನಿಂದ ಮಾತ್ರ ಸಾಧ್ಯ. ಅದು ದೇಶಕ್ಕಾಗಿ ಹೋರಾಟ ಮಾಡುತ್ತಿದೆ. ಪಾಕಿಸ್ತಾನದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಧ್ರುವನಾರಾಯಣ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಲೇಬೇಕು ಎಂದು ಆಗ್ರಹಿಸಿದರು.

× Chat with us