ನವದೆಹಲಿ : ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಕೌಂಟ್‌ಡೌನ್‌ಗೆ ಧ್ವನಿ ನೀಡುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿ ವಲರ್ಮತಿ ಅವರು ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ.
ಚಂದ್ರಯಾನ-3 ರಾಕೆಟ್ ಉಡಾವಣೆಯ ಸಂದರ್ಭದಲ್ಲೂ ಸಹಾ ಕೌಂಟ್‌ಡೌನ್‌ಗೆ ಇವರು ಧ್ವನಿ ನೀಡಿದ್ದು, ಇಸ್ರೋದಲ್ಲಿ ಅದು ಅವರ ಕೊನೆಯ ಧ್ವನಿಯಾಗಿತ್ತು.
ಅವರ ನಿಧನಕ್ಕೆ ಇಸ್ರೋದ ಮಾಜಿ ನಿರ್ದೇಶಕರಾದ ಡಾ.ಪಿ.ವಿ.ವೆಂಕಟಕೃಷ್ಣನ್ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‌ಗಳ ಕೌಂಟ್‌ಡೌನ್‌ಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3 ಆಕೆಯ ಅಂತಿಮ ಕೌಂಟ್‌ಡೌನ್ ಘೋಷಣೆಯಾಗಿತ್ತು. ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಲರ್ಮತಿ ಆರ್‌ಐಎಸ್‌ಎಟಿ-1ರ ಪಾಜೆಕ್ಟ್ ಡೈರೆಕ್ಟರ್ ಆಗಿದ್ದು, 2015ರಲ್ಲಿ ಸರ್ಕಾರ ನೀಡಿದ ಅಬ್ದುಲ್ ಕಲಾಂ ಪ್ರಶಸ್ತಿಗೆ ಭಾಜನರಾಗಿದ್ದರು. ವಲರ್ಮತಿ 1984ರಲ್ಲಿ ಇಸ್ರೋಗೆ ಸೇರಿದ್ದು, ಇನ್ಸಾಟ್ 2ಎ, ಐಆರ್‌ಎಸ್, ಐಸಿ, ಐಡಿ, ಟಿಇಎಸ್ ಸೇರಿದಂತೆ ಹಲವು ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…
ಮೈಸೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡಜನರ ಕಲ್ಯಾಣಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಬದ್ಧತೆಯಿಂದ ಅವುಗಳನ್ನು…
ಮೈಸೂರು : ನಾನು ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ, ಕಾಂಗ್ರೆಸ್ ಬಿಟ್ಟು ಹೊರ ಬಂದು 5-10 ಕ್ಷೇತ್ರಗಳಲ್ಲಿ ಅವರ ಅಭ್ಯರ್ಥಿಗಳನ್ನು…
ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಇರಾನ್-ಅಮೇರಿಕಾ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಂದು ನಡೆಯಬೇಕಿದ್ದ…
ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ (ಬಾಳೇಬರೆ) ಪ್ರದೇಶದಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಗುಡ್ಡ…
ಹನೂರು : ಕೂಲಿ ಕೆಲಸಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ನೀರಿನಲ್ಲಿ ಈಜಿಕೊಂಡು ಬರುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ…