BREAKING NEWS

ಚಂದ್ರನ ಮೇಲೆ ಇಳಿಯುವ ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ವಿಡಿಯೋ ರಿಲೀಸ್ ಮಾಡಿದ ಇಸ್ರೋ

ಬೆಂಗಳೂರು : ತಾಜಾ ಆಗಿ ವಿಕ್ರಮ್ ಸೆರೆ ಹಿಡಿದ ಅದ್ಭುತ ವಿಡಿಯೋ ಇಲ್ಲಿದೆ. ಚಂದ್ರನ ಮೇಲೆ ಇಳಿಯೋಕು ಮುನ್ನ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ್ದ ವಿಡಿಯೋವೊಂದನ್ನು ಇಸ್ರೋ (ISRO) ಇದೀಗತಾನೆ ರಿಲೀಸ್ ಮಾಡಿದೆ. ಲ್ಯಾಂಡರ್ ಕೆಳಗಿಳಿಯುವ ವೇಗಕ್ಕೆ ತಕ್ಕಂತೆ ವಿಡಿಯೋವನ್ನು ಸೆರೆಹಿಡಿದಿದೆ. ಈ ವೇಳೆ ರೋವರ್‌ ಮೇಲ್ಮೈನ ಒಂದು ಭಾಗ ಮತ್ತು ಚಂದ್ರನ ಮೇಲಿರುವ ಗುಳಿಗಳು ಕ್ಯಾಮರಾ ಕಣ್ಣಿಗೆ ಗೋಚರಿಸಿವೆ.

ಚಂದ್ರನ ಮೇಲೆ ಪ್ರಜ್ಞಾನ್ ರೋವರ್ ಓಡಾಟ : ಚಂದ್ರನ ಮೇಲೆ ಚಂದ್ರಯಾನ 3 ಪ್ರಜ್ಞಾನ್ ರೋವರ್‌ನ ರಥಯಾತ್ರೆ ಆರಂಭವಾಗಿದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ 3 ಗಂಟೆ ಬಳಿಕ ಪ್ರಜ್ಞಾನ್ ರೋವರ್ ಹೊರಬಂದಿದೆ. ಗುರುವಾರ ರಾತ್ರಿಯಿಂದಲೇ ಲ್ಯಾಂಡರ್ ಮತ್ತು ರೋವರ್ ಅಧ್ಯಯನ ಆರಂಭಿಸಿವೆ. 7 ಉಪಕರಣಗಳು, 7 ವಿಷಯಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿವೆ.

‘ರೋವರ್‌ನ ಎಲ್ಲಾ ಸಿಸ್ಟಂಗಳು ನಾರ್ಮಲ್’: ಪ್ರಗ್ಯಾನ್ ರೋವರ್‌ಗೆ ಚಕ್ರಗಳನ್ನು ಅಳವಡಿಸಲಾಗಿದ್ದು, ರ‍್ಯಾಂಪ್‌ ಮೂಲಕ ನಿಧಾನವಾಗಿ ರೋವರ್ ಕೆಳಗೆ ಇಳಿದಿದೆ. ಮೊದಲಿಗೆ ರೋವರ್‌ನ ಸೋಲಾರ್ ಫಲಕಗಳು ತೆರೆದುಕೊಂಡಿವೆ. ರೋವರ್ ಕಾರ್ಯಚಟುವಟಿಕೆ ಕುರಿತು ಇಸ್ರೋ ಟ್ವೀಟ್ ಮಾಡಿ ಅಪ್‌ಡೇಟ್ ನೀಡಿದೆ. ಪೂರ್ವನಿಗದಿಯಂತೆ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ. ವಿಕ್ರಮ್ ರೋವರ್‌ನ ಎಲ್ಲಾ ಸಿಸ್ಟಂಗಳು ಯಥಾ ಸ್ಥಿತಿಯಲ್ಲಿವೆ ಅಂತೇಳಿದೆ.

ವಿಕ್ರಂ ಲ್ಯಾಂಡರ್‌ನಿಂದ ಬೇರ್ಪಟ್ಟ ಪ್ರಜ್ಞಾನ್ ರೋವರ್: ಲ್ಯಾಂಡರ್ ಪೇಲೋಡ್ಸ್ ILSA, ರಂಭಾ ಮತ್ತು ಚಸ್ತೆ ಕಾರ್ಯಾರಂಭ ಮಾಡಿವೆ. ರೋವರ್ ಓಡಾಟ ಕೂಡ ಪ್ರಾರಂಭವಾಗಿದೆ. ಪ್ರಪೊಲ್ಷನ್ ಮಾಡ್ಯೂಲ್‌ನ ಶೇಪ್‌ ಪೇಲೋಡ್ ಕಾರ್ಯಾರಂಭ ಮಾಡಿದೆ ಅಂತಾ ಟ್ವೀಟ್ ಮೂಲಕ ಇಸ್ರೋ ಮಾಹಿತಿ ನೀಡಿದೆ. ವಿಕ್ರಮ್ ಲ್ಯಾಂಡರ್‌ನಿಂದ ರೋವರ್ ಕೆಳಗಿಳಿದು ಸರಾಗವಾಗಿ ಓಡಾಟ ಆರಂಭವಿಸಿದೆ. ಇದು ಖಚಿತವಾಗುತ್ತಿದ್ದಂತೆಯೇ ವಿಕ್ರಂ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಅಧಿಕೃತವಾಗಿ ಬೇರ್ಪಡೆಯಾಗಿದೆ.

andolanait

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

5 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

5 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

6 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

6 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

8 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

8 hours ago