ಕಠ್ಮಂಡು: ಜಗತ್ತಿನಲ್ಲೇ ಅತಿ ಎತ್ತರವಾದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 10 ಬಾರಿ ಯಶಸ್ವಿಯಾಗಿ ಏರಿ ಬಂದಿದ್ದ ಹಾಗೂ ಐರ್ಲೆಂಡ್‌ನ ಹೆಸರಾಂತ ಪರ್ವತಾರೋಹಿ 56 ವರ್ಷದ ನೊಯೇಲ್ ಹನ್ನಾ ಮೃತರಾಗಿದ್ದಾರೆ.
ಅವರು ನೇಪಾಳದ ಅನ್ನಪೂರ್ಣ ಪರ್ವತ ಪ್ರದೇಶದಲ್ಲಿ ಪರ್ವತಾರೋಹಣ ಮಾಡಿ ವಾಪಸ್ ಬರುವಾಗ ಟೆಂಟ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಅವರ ಮೃತದೇಹವನ್ನು ಕೆಳಗೆ ತರಲಾಗುತ್ತಿದ್ದು ಅಲ್ಲಿಂದ ಕಠ್ಮಂಡುವಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಕಿಂಗ್‌ನ ಮಿಂಗ್ಮಾ ಶೆರ್ಫಾ ತಿಳಿಸಿದ್ದಾರೆ.
ನೊಯೇಲ್ ಅವರು ಸಾಯುವ ಮುನ್ನ 8,091 ಮೀಟರ್ ಎತ್ತರವಿರುವ ಅನ್ನಪೂರ್ಣ ಪರ್ವತವನ್ನು (ಮೌಂಟ್ ಎವರೆಸ್ಟ್ 8,849) ಯಶಸ್ವಿಯಾಗಿ ಏರಿದ್ದರು.
2006 ರಿಂದ 2020ರವರೆಗೆ ವಿವಿಧ ಸಂದರ್ಭಗಳಲ್ಲಿ ನೊಯೇಲ್ ಒಟ್ಟು 10 ಬಾರಿ ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದರು. ಈ ಮೂಲಕ ಅವರು ಪ್ರಪಂಚದ ಟಾಪ್ 10 ಪರ್ವತಾರೋಹಿಗಳ ಸಾಲಿನಲ್ಲಿ ಹೆಸರು ಪಡೆದಿದ್ದರು.
ಇದೇ ವೇಳೆ ನೊಯೇಲ್ ಅವರ ಜೊತೆ ಅನ್ನಪೂರ್ಣ ಪರ್ವತ ಏರಲು ಹೋಗಿದ್ದ ಭಲಜೀತ್ ಕೌರ್ ಹಾಗೂ ಅರ್ಜುನ್ ವಾಜಪೇಯಿ ಅವರನ್ನು ಅಪಾಯದಿಂದ ರಕ್ಷಿಸಲಾಗಿದೆ. ಕಳೆದ ವಾರ ಇಲ್ಲಿಯೇ ಹಿಮಗಾಳಿಯಿಂದ ನೇಪಾಳದ ಮೂವರು ಪರ್ವತಾರೋಹಿಗಳು ಮೃತಪಟ್ಟಿದ್ದರು.
ಅತ್ಯಂತ ಅಪಾಯಕಾರಿಯಾಗಿರುವ ಅನ್ನಪೂರ್ಣ ಪರ್ವತಪ್ರದೇಶದಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…
ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…
ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…
ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…
ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…