ಆರ್‌ಎಸ್‌ಎಸ್‌ ಇಲ್ಲವೆಂದಿದ್ದರೆ ಪಾಕಿಸ್ತಾನವಾಗುತ್ತಿತ್ತು ಭಾರತ!; ಪ್ರಭು ಚೌಹಾಣ್ ಹೇಳಿದ್ದೇಕೆ ಗೊತ್ತಾ?

ಬೆಂಗಳೂರು: ಆರ್‌ಎಸ್‌ಎಸ್‌ ಇಲ್ಲದೇ ಇದ್ದಿದ್ದರೆ, ಭಾರತ ಪಾಕಿಸ್ತಾನವಾಗುತ್ತಿತ್ತು. ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್‌ನವರೇ ಎಂದು ಸಚಿವ ಪ್ರಭು ಚೌಹಾಣ್ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇದನ್ನು ಸಹಿಸಲು ಆಗದೆ ಹೀಗೆಲ್ಲಾ ಮಾತನಾಡ್ತಿದ್ದಾರೆ. ಆರ್‌ಎಸ್‌ಎಸ್‌ ಸಂಸ್ಥೆ ದೇಶದ ಪರ ಕೆಲಸ ಮಾಡ್ತಿದೆ. ಪ್ರಧಾನಿ ನರೇಂದ್ರ ಮೋದಿ ನಾವೆಲ್ಲ ಒಂದು ಅಂತಿದ್ದಾರೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಲಿ. ಮಾಜಿ ಸಿಎಂ ಆಗಿ ಹೇಗೆ ಮಾತಾಡಬೇಕೆಂದು ಮೊದಲು ತಿಳಿದುಕೊಳ್ಳಲಿ ಎಂದಿದ್ದಾರೆ.

ಆರ್‌ಎಸ್‌ಎಸ್‌ ಏನು ಎಂಬುದು ಜನರಿಗೆ ಗೊತ್ತಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆ ಖಂಡಿಸುತ್ತೇನೆ. ಆರ್‌ಎಸ್‌ಎಸ್‌ ಇರೋದಕ್ಕೆ ದೇಶ ಇದೆ ಎಂದು ಪ್ರಭು ಚೌಹಾಣ್ ಟೀಕಿಸಿದ್ದಾರೆ.

× Chat with us