ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಜನವರಿ 17 ) ನಡೆದ ರೋಚಕ ಮೂರನೇ ಟಿ 20 ಪಂದ್ಯ ಡ್ರಾ ಆದ ಕಾರಣ ಸೂಪರ್ ಓವರ್ ನಡೆದಿದ್ದು, ಅದೂ ಸಹ ಟೈ ಆಗಿ ಮತ್ತೊಂದು ಸೂಪರ್ ಓವರ್ ನಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಅಬ್ಬರದ ಶತಕ ಹಾಗೂ ರಿಂಕು ಸಿಂಗ್ ಆಕ್ರಮಣಕಾರಿ ಆಟದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ ಗೆಲ್ಲಲು 213 ರನ್ ಗಳ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಅಫ್ಘಾನಿಸ್ತಾನ ಅಂತಿಮ ಎಸೆತದವರೆಗೂ ದಿಟ್ಟ ಹೋರಾಟ ನಡೆಸಿತು. ರಹ್ಮನ್ನುಲ್ಲಾ ಗುರ್ಬಜ್ ಹಾಗೂ ಇಬ್ರಾಹಿಂ ಜದ್ರನ್ ಉತ್ತಮ ಆಟದಿಂದ ಒಳ್ಳೆಯ ಆರಂಭ ಪಡೆದುಕೊಂಡಿದ್ದ ತಂಡವನ್ನು ಮೊಹಮ್ಮದ್ ನಬಿ ಹಾಗೂ ಗುಲ್ಬದಿನ್ ನೈಬ್ ಗೆಲುವಿನ ಸನಿಹಕ್ಕೆ ತಂದಿತ್ತು. ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಈ ಮೂಲಕ ಪಂದ್ಯ ಡ್ರಾ ಆಗಿ ಸೂಪರ್ ಓವರ್ ನಡೆಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 16 ರನ್ ಗಳಿಸಿ ಭಾರತಕ್ಕೆ 17 ರನ್ ಗುರಿ ನೀಡಿತು. ಗುರ್ಬಜ್ ಬೌಂಡರಿ ಹಾಗೂ ನಬಿ ಸಿಕ್ಸರ್ ಬಾರಿಸುವ ಮೂಲಕ ಸೂಪರ್ ಓವರ್‌ನಲ್ಲೂ ಅಬ್ಬರಿಸಿದರು. ಇತ್ತ ಭಾರತ ಸಹ ಸೂಪರ್ ಓವರ್‌ನಲ್ಲಿ 16 ಗಳಿಸಿದ್ದು, ಪಂದ್ಯ ಮತ್ತೆ ಡ್ರಾಗೊಂಡು ಮತ್ತೊಂದು ಸೂಪರ್ ಓವರ್ ನಡೆದಿದೆ.
ಭಾರತದ ಪರ ಸೂಪರ್ ಓವರ್‌ನಲ್ಲಿ ರೋಹಿತ್ ಹಾಗೂ ಜೈಸ್ವಾಲ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ರೋಹಿತ್ 1, ಎರಡನೇ ಎಸೆತದಲ್ಲಿ ಜೈಸ್ವಾಲ್ 1 ರನ್ ಬಾರಿಸಿದರೆ, 3 ಹಾಗೂ 4ನೇ ಎಸೆತಗಳಲ್ಲಿ ರೋಹಿತ್ ಸಿಕ್ಸರ್ ಚಚ್ಚಿದರು ಹಾಗೂ 5 ನೇ ಎಸೆತದಲ್ಲಿ 1 ರನ್ ಕಲೆ ಹಾಕಿದರು. ಅಂತಿಮವಾಗಿ 1 ಎಸೆತಕ್ಕೆ 2 ರನ್ ಬೇಕಿದ್ದಾಗ ಜೈಸ್ವಾಲ್ 1 ರನ್ ಗಳಿಸಿದರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…