ವಿಶ್ವಸಂಸ್ಥೆ ನೆರವನ್ನು ತಿರಸ್ಕರಿಸಿದ ಭಾರತಕ್ಕೆ ಬುದ್ಧಿ ಹೇಳಿದ ಗುಟರೆಸ್‌

ವಾಷಿಂಗ್ಟನ್‌: ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಹಾಯಹಸ್ತ ಚಾಚಲು ಮುಂದಾದ ವಿಶ್ವಸಂಸ್ಥೆಯ ನೆರವನ್ನು ಭಾರತ ನಿರಾಕರಿಸಿರುವುದಾಗಿ ತಿಳಿದುಬಂದಿದೆ.

ವಿಶ್ವಸ್ಥೆಯ ಏಜೆನ್ಸಿಗಳ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ಹೇಳಿದ್ದೆವು ಆದರೆ, ಭಾರತ ತನಗೆ ಬೇಕಿರುವ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆಯನ್ನು ಹೊಂದಿರುವುದಾಗಿ ಹೇಳಿದೆ ಎಂದು ಡಬ್ಲೂಎಚ್‌ಓ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗಟರೆಸ್‌ ಹೇಳಿದ್ದಾರೆ.

ನಾವು ಭಾರತಕ್ಕೆ ಸಹಾಯ ಮಾಡಲು ಈಗಲೂ ಸಿದ್ಧವಿದ್ದು, ಅಗತ್ಯ ವಸ್ತುಗಳ ಪಟ್ಟಿಯನ್ನು ಕಳಿಸಿಕೊಟ್ಟರೆ ಅದನ್ನು ಪೂರೈಸಲಾಗುವುದು. ಭಾರತಕ್ಕೆ ಈ ಕುರಿತು ಮರಳಿ ಮನವರಿಕೆ ಮಾಡಿಕೊಡಲಾಗಿದೆಯಾದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

× Chat with us