ನವದೆಹಲಿ : ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಸತತ ಮೂರು ತ್ರೈಮಾಸಿಕಗಳಲ್ಲಿ ಹೆಚ್ಚು ಮಾಡಿರುವ ಪರಿಣಾಮವಾಗಿ, ಅಂಚೆ ಕಚೇರಿ ಅವಧಿ ಠೇವಣಿಗಳು ಮತ್ತೆ ಸ್ಪರ್ಧಾತ್ಮಕವಾಗಿ ಕಾಣುತ್ತಿವೆ. ಈ ಉಳಿತಾಯ ಯೋಜನೆಗಳು ಬಡ್ಡಿ ದರ ಏರಿಕೆಗೂ ಮೊದಲು ಬ್ಯಾಂಕ್ ಎಫ್.ಡಿ.ಗಳಿಗಿಂತ ಕಡಿಮೆ ಲಾಭ ತಂದುಕೊಡುತ್ತಿದ್ದವು.
ಅಂಚೆ ಕಚೇರಿಯ ಎರಡು ವರ್ಷಗಳ ಅವಧಿ ಠೇವಣಿಗೆ ಈಗ ಶೇ 6.9ರಷ್ಟು ಬಡ್ಡಿ ಸಿಗುತ್ತಿದೆ. ಇದೇ ಅವಧಿಯ ಬಹುತೇಕ ಬ್ಯಾಂಕ್ ಎಫ್.ಡಿ.ಗಳು ಈಗ ಇಷ್ಟೇ ಪ್ರಮಾಣದ ಬಡ್ಡಿ ನೀಡುತ್ತಿವೆ.
ಆರ್‌ಬಿಐ ರೆಪೊ ದರವನ್ನು 2022ರ ಮೇ ತಿಂಗಳಿನಿಂದ ಹೆಚ್ಚಿಸುತ್ತಿದೆ. ಬ್ಯಾಂಕ್‌ಗಳು ತಮ್ಮಲ್ಲಿನ ಠೇವಣಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಳೆದ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ಕೆಲಸಕ್ಕೆ ಚುರುಕು ನೀಡಿದವು.
ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಗರಿಷ್ಠ ಶೇ 0.30ರವರೆಗೆ, ಜನವರಿ–
ಮಾರ್ಚ್ ತ್ರೈಮಾಸಿಕದಲ್ಲಿ ಗರಿಷ್ಠ ಶೇ 1.10ರವರೆಗೆ ಹಾಗೂ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜೂನ್ ತ್ರೈಮಾಸಿಕಕ್ಕೆ ಗರಿಷ್ಠ ಶೇ 0.70ರವರೆಗೆ ಹೆಚ್ಚಿಸಿದೆ. ಇದಕ್ಕೂ ಮೊದಲು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು ಸತತ ಒಂಬತ್ತು ತ್ರೈಮಾಸಿಕಗಳಲ್ಲಿ ಯಾವ ಬದಲಾವಣೆಯನ್ನೂ ಕಂಡಿರಲಿಲ್ಲ.
ಆರ್‌ಬಿಐ ಅಂದಾಜಿನ ಅನ್ವಯ 1 ವರ್ಷದಿಂದ 2 ವರ್ಷಗಳವರೆಗಿನ, ಬ್ಯಾಂಕ್ ರಿಟೇಲ್ ಠೇವಣಿಗಳ ಮೇಲಿನ ಸರಾಸರಿ ಬಡ್ಡಿ ದರವು ಈಗ ಶೇ 6.9ರಷ್ಟು ಇದೆ. ಇದು 2022ರ ಸೆಪ್ಟೆಂಬರ್‌ನಲ್ಲಿ ಶೇ 5.8ರಷ್ಟು ಇತ್ತು.
ಮೂರು ವರ್ಷಗಳ ಅವಧಿಯ ಅಂಚೆ ಕಚೇರಿ ಅವಧಿ ಠೇವಣಿಯ ಬಡ್ಡಿದರವು ಶೇ 7ಕ್ಕೆ ತಲುಪಿದೆ. ಇದು ಈ ಮೊದಲು ಶೇ 5.5ರಷ್ಟು ಇತ್ತು. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, ಎರಡು ವರ್ಷಕ್ಕಿಂತ ಹೆಚ್ಚಿನ ಹಾಗೂ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗೆ ಶೇ 7ರಷ್ಟು ಬಡ್ಡಿ ನೀಡುತ್ತಿದೆ.
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್ಕೌಂಟರ್ ಹೇಳಿಕೆ…