ಬೆಂಗಳೂರು : ನಮ್ಮ ಮಾತನ್ನು ಕೇಳದಿದ್ದರೇ ನಾವು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ಹೆಚ್‌ಡಿ ದೇವೇಗೌಡ ಅವರಿಗೆ ಸಿಎಂ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಜೊತೆಗೆ ಮೈತ್ರಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 11ರ ಬಳಿಕ ನಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ರಾಜ್ಯದಲ್ಲಿ ನಮಗೆ ಮೂರನೇ ಶಕ್ತಿಯಾಗಿ ಬೆಳೆಯಲು ಅವಕಾಶವಿದೆ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಮಾತನ್ನು ಕೇಳದಿದ್ದರೆ ನಾವು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.
ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆ ನೋಡಿ ಬೇಸರವಾಯ್ತು. ಕುಮಾರಸ್ವಾಮಿ ಅವರೇ ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ. ದೇವೇಗೌಡ ಅವರು ಒತ್ತಡಕ್ಕೆ ಒಳಗಾಗಿದ್ದಾರೆ, ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ.
ಎಲ್ಲಾ ಶಾಸಕರು ಜಾತ್ಯತೀತ ಸಿದ್ಧಾಂತದಲ್ಲೇ ಗೆದ್ದು ಬಂದಿರುವುದು. ಈಗಾಗಲೇ ಜೆಡಿಎಸ್‌ನ ಐವರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇದು ದೇವೇಗೌಡ, ಕುಮಾರಸ್ವಾಮಿ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು. ಹೀಗಾಗಿ ಸಮಾಧಾನದಿಂದ ಅವರಿಗೆ ಸಂದೇಶ ಮುಟ್ಟಿಸುತ್ತಿದ್ದೇನೆ ಎಂದು ತಿಳಿಸಿದರು.
ಮಾಧ್ಯಮವೊಂದರ ವರದಿ ಪ್ರಕಾರ ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ತಮ್ಮ ಕೊನೆಗಾಲದಲ್ಲಿ ತಮ್ಮ…
ಹದಿನೆಂಟರ ಹರೆಯದ ಭಾರತೀಯ ಕುವರ ಆದರೇನು ವಯಸ್ಸಿನಲ್ಲಿ ಕಿರಿಯ ಇತಿಹಾಸ ಸೃಷ್ಟಿಸಿದೆ ಮಹಾರಾಯ! ಚತುರಮತಿ ಚದುರಂಗದಾಟದಲಿ ವಿಶ್ವ ಚಾಂಪಿಯನ್ ಪಟ್ಟ…
ಮೈಸೂರು-ಚಾಮರಾಜನಗರ ನಡುವೆ ಸಂಚರಿಸುವ ರೈಲಿನಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ನಿತ್ಯ ಈ ರೈಲಿನಲ್ಲಿ ಮಹಿಳೆಯರು,…
ಮಲಯಾಳಂ-ತಮಿಳು-ಕನ್ನಡ-ತೆಲುಗು ಶಬ್ದಕೋಶ’ ಇದೊಂದು ಮಲಯಾಳಂನ ವಿಶಿಷ್ಟ ಶಬ್ದಕೋಶ. ಇದರಲ್ಲಿ ೧೬,೦೦೦ ಮಲಯಾಳಂ ಪದಗಳಿದ್ದು, ಅವುಗಳಿಗೆ ಮಲಯಾಳಂ ಸೇರಿ ಇತರ ಮೂರು…
ನವೀನ್ ಡಿಸೋಜ ಮೋಡಕವಿದ ವಾತಾವರಣ, ಬಿಸಿಲಿನ ಕೊರತೆಯಿಂದ ಸಂಕಷ್ಟ; ಆತಂಕದಲ್ಲೇ ಕೊಯ್ಲು ಪ್ರಕ್ರಿಯೆ ಪ್ರಾರಂಭ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹವಾಮಾನ…