BREAKING NEWS

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ : ಬಿಜೆಪಿ

ಬೆಂಗಳೂರು : ತನ್ನ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಧಿಸಲು ದೇಶದ ಭದ್ರತೆಯ ವಿಷಯದಲ್ಲಿ ರಾಜೀಯಾಗುವ, ವಿಶ್ವದ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲೆಲ್ಲಾ ಆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ. ಸಕಲರಿಗೂ ನೆಮ್ಮದಿಯ ತಾಣವಾಗಿದ್ದ ಬೆಂಗಳೂರು ಈಗ ಭಯೋತ್ಪಾದಕರ ಬೀಡಾಗುತ್ತಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ತನ್ನ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಧಿಸಲು ದೇಶದ ಭದ್ರತೆಯ ವಿಷಯದಲ್ಲಿ ರಾಜೀಯಾಗುವ, ವಿಶ್ವದ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲೆಲ್ಲಾ ಆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ. ಸಕಲರಿಗೂ ನೆಮ್ಮದಿಯ ತಾಣವಾಗಿದ್ದ ಬೆಂಗಳೂರು ಈಗ ಭಯೋತ್ಪಾದಕರ ಬೀಡಾಗುತ್ತಿದೆ. ಆದರೆ ಈ ಬಗ್ಗೆ ತುಘಲಕ್ ಸರ್ಕಾರದ ಪ್ರತಿನಿಧಿಗಳು, ಬಂಧನವಾದ ಉಗ್ರರ ಸಮಗ್ರ ತನಿಖೆಗೂ ಮುನ್ನ ಉಗ್ರರಿಗೆ ಕ್ಲೀನ್ ಚಿಟ್ ನೀಡಲು ಪ್ರಯತ್ನಿಸುತ್ತಿದ್ದಾರೆಂದು ಹೇಳಿದೆ.

ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಉಗ್ರಗಾಮಿಗಳ ಪರ ತನ್ನ ಮೃದು ಧೋರಣೆಯನ್ನು ತೋರುತ್ತಾ ಬಂದಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗುವ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದರೇ, ಅವರಿಗೆ ಕಾನೂನು ನೆರವನ್ನು ಒದಗಿಸಲು ಕಾಂಗ್ರೆಸ್‌ನ ಲೀಗಲ್ ಸೆಲ್ ಸದಾ ಸಿದ್ದವಾಗಿರುತ್ತದೆ.

ಭಯೋತ್ಪಾದಕ ಕೃತ್ಯಗಳಿಂದ ಸೈನಿಕರು, ದೇಶದ ಜನಸಾಮಾನ್ಯರು ಬಲಿಯಾದರೇ ಅದಕ್ಕೆ ಸಂತಾಪ ಸೂಚಿಸದ ಕಾಂಗ್ರೆಸ್, ಒಂದು ವೇಳೆ ಭಯೋತ್ಪಾದಕನೊಬ್ಬ ಪೊಲೀಸರ ಗುಂಡಿಗೆ ಬಲಿಯಾದರೇ ಅದಕ್ಕೆ ಕಣ್ಣೀರು ಸುರಿಸುತ್ತದೆ. ಹಲವಾರು ವಿಧ್ವಂಸಕ ಕೃತ್ಯ ನಡೆಸಿ, ಅಮಾಯಕರನ್ನು ಬಲಿ ಪಡೆದ ಭಯೋತ್ಪಾದಕ ಮಸೂದ್ ಅಜರ್‌ನನ್ನು, ರಾಹುಲ್ ಗಾಂಧಿ ಮಸೂದ್”ಜೀ” ಎಂದು ಕರೆಯುವ ಮೂಲಕ, ಉಗ್ರರ ಬಗ್ಗೆ ತಮಗಿರುವ ಆಂತರಿಕ ಪ್ರೇಮವನ್ನು ವ್ಯಕ್ತಪಡಿಸಿದ್ದರು.

ಈ ಹಿಂದೆ, ಭಯೋತ್ಪಾದಕರ ವಿರುದ್ಧ ನಡೆದ ಬಾಟ್ಲಾ ಹೌಸ್ ಎನ್ ಕೌಂಟರ್, ಇಶ್ರತ್ ಜಹಾನ್ ಎನ್‌ಕೌಂಟರ್‌ಗಳನ್ನು ನಕಲಿ ಎಂದು ಆರೋಪಿಸಿ ಕಾಂಗ್ರೆಸ್ ಬಹಿರಂಗವಾಗಿ ಭಯೋತ್ಪಾದಕರ ಹಾಗೂ ಆ ಸಂಘಟನೆಗಳ ಪರ ನಿಂತಿತ್ತು. ಅದೇ ರೀತಿ ಉಗ್ರಗಾಮಿಗಳಿಗೆ ಸಿಂಹಸ್ವಪ್ನವಾಗಿದ್ದ ಪೋಟಾ ಕಾಯಿದೆಯನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್, ಭಯೋತ್ಪಾದಕರಿಗೆ ನೈತಿಕ ಬಲ ನೀಡಿತ್ತು ಎಂದು ತಿಳಿಸಿದೆ.

ದೇಶದ ರಕ್ಷಣಾ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದ 26/11 ಮುಂಬೈ ದಾಳಿಯ ಸಂದರ್ಭದಲ್ಲಿ ದೇಶವೇ ಒಟ್ಟಾಗಿ ನಿಲ್ಲಬೇಕಿತ್ತು. ಆದರೆ, ಅದಕ್ಕೆ ‘ಹಿಂದೂ ಭಯೋತ್ಪಾದಕರ ಕೃತ್ಯ’ ಎಂಬ ಸುಳ್ಳು ತೇಲಿ ಬಿಟ್ಟು, ನೈಜ ಉಗ್ರಗಾಮಿಗಳ ಕೃತ್ಯವನ್ನು ಮರೆಮಾಚಲು ಕಾಂಗ್ರೆಸ್ ಯತ್ನಿಸಿತ್ತು. ಈ ರೀತಿಯಾಗಿ ನಮ್ಮ ಸೈನ್ಯದ ಹಾಗೂ ಪೊಲೀಸರ ಆತ್ಮ ಬಲವನ್ನು ಕುಗ್ಗಿಸುವ ಕೀಳು ಪ್ರಯತ್ನವನ್ನು ಕಾಂಗ್ರೆಸ್ ದಶಕಗಳಿಂದ ಮಾಡುತ್ತಿದೆ.

ಹೀಗಾಗಿ ಭಯೋತ್ಪಾದಕ ಸಂಘಟನೆಗಳು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ತಮ್ಮ ಸ್ಲೀಪರ್ ಸೆಲ್‌ಗಳನ್ನು ಜಾಗೃತಗೊಳಿಸುತ್ತವೆ, ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತವೆ. ಇದೆಲ್ಲವೂ ಕಾಂಗ್ರೆಸ್ ಪಕ್ಷ ಉಗ್ರರ ಮೇಲೆ ಹೊಂದಿರುವ ಮೃದು ಧೋರಣೆಯ ಪ್ರತೀಕವಾಗಿದೆ ಎಂದು ಹೇಳಿದೆ.

ಈಗ ಗೃಹ ಸಚಿವ ಪರಮೇಶ್ವರ್ ಕೊಟ್ಟಿರುವ ಹೇಳಿಕೆಯೂ ಇದರದೇ ಭಾಗ, ತನ್ನ ಓಲೈಕೆ ರಾಜಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷ ದೇಶದ ಭದ್ರತೆಯ ವಿಚಾರದಲ್ಲಿ ರಾಜೀಯಾಗುವಂತಹ ಧೋರಣೆಯನ್ನು ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ ಎಂದು ತಿಳಿಸಿದೆ.

lokesh

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

26 mins ago

2025ರ ನೆನಪು: ಅಗಲಿದ ಗಣ್ಯರ ನೆನಪಿನ ಮಾಲಿಕೆ…

2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ  ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…

32 mins ago

ಆಪರೇಟರ್ ಸಮಯ ಪ್ರಜ್ಞೆ: ನಕಲಿ ಜಿಪಿಎಗೆ ಬ್ರೇಕ್

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…

43 mins ago

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

10 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

12 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

13 hours ago