ಸಿಐಎಸ್​ಸಿಇ 10, 12ನೇ ತರಗತಿಗಳ ಪರೀಕ್ಷೆ ಫಲಿತಾಂಶ ಪ್ರಕಟ

ಹೊಸದಿಲ್ಲಿ: ಇಂಡಿಯನ್​ ಸ್ಕೂಲ್ ಸರ್ಟಿಫಿಕೇಟ್​ ಪರೀಕ್ಷೆಗಳ ಮಂಡಳಿ (ಸಿಐಎಸ್‌ಸಿಇ) 10 ನೇ ತರಗತಿ (​ಐಸಿಎಸ್‌ಇ) ಮತ್ತು 12ನೇ ತರಗತಿ (ಐಎಸ್‌ಸಿ) ಪರೀಕ್ಷೆಗಳ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ.

ಅಧಿಕೃತ ವೆಬ್​ಸೈಟ್​ಗಳಾದ​ www.cisce.org ಮತ್ತು results.cisce.org ನಲ್ಲಿ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಬಿಡುಗಡೆ ಮಾಡಲಾಗಿದೆ ಎಂದು ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಗೆರಿ ಅರಾಥೂನ್​ ತಿಳಿಸಿದ್ದಾರೆ.

ಕೋಷ್ಟಕ ದಾಖಲಾತಿಗಳನ್ನು ಕರಿಯರ್ಸ್​ ಪೋರ್ಟಲ್‌ಗಳ ಮೂಲಕ ಶಾಲೆಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಆಯಾ ಶಾಲೆಗಳು ಈ ಕರಿಯರ್ಸ್​ ಪೋರ್ಟಲ್​​ನಲ್ಲಿ ಪ್ರಿನ್ಸಿಪಲ್​​​ಗಳ ಲಾಗಿನ್ ಐಡಿ, ಪಾಸ್​ವರ್ಡ್​ ಬಳಸಿ, ಪಡೆಯಬಹುದು.

× Chat with us