ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪುರುಷರ ಟಿ-20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಬಿಡುಗಡೆ ಮಾಡಿದ್ದು, ಅಕ್ಟೋಬರ್‌ 17ರಿಂದ ಪಂದ್ಯಗಳು ಶುರುವಾಗಲಿವೆ.

ನವೆಂಬರ್‌ 14ರಂದು ಫೈನಲ್‌ ಪಂದ್ಯ ನಡೆಯಲಿದೆ. ಸೂಪರ್‌ 12 ಹಂತದ ಗ್ರೂಪ್‌ ಎರಡರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಿವೆ. ಅಕ್ಟೋಬರ್‌ 24ರಂದು ಭಾರತ ತಂಡವು ಪಾಕಿಸ್ತಾನದ ಎದುರು ಟೂರ್ನಿಯ ಮೊದಲ ಪಂದ್ಯ ಆಡಲಿದೆ. ದುಬೈನಲ್ಲಿ ಆ ಪಂದ್ಯ ನಿಗದಿಯಾಗಿದೆ. ಅಫ್ಗಾನಿಸ್ತಾನ ಸಹ ಎರಡನೇ ಗುಂಪಿನಲ್ಲಿದ್ದು, ನವೆಂಬರ್‌ 3ರಂದು ಅಬುಧಾಬಿಯಲ್ಲಿ ಭಾರತ–ಅಫ್ಗನ್‌ ಪಂದ್ಯ ನಿಗದಿಯಾಗಿದೆ.

ನ.10ರಂದು ಮೊದಲ ಸೆಮಿಫೈನಲ್‌ ಅಬುಧಾಬಿಯಲ್ಲಿ ಹಾಗೂ ನ.12ರಂದು ಎರಡನೇ ಸೆಮಿಫೈನಲ್‌ ದುಬೈನಲ್ಲಿ ನಡೆಯಲಿದೆ. ಭಾರತದಲ್ಲಿ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು.

ಅರ್ಹತೆಗಾಗಿ ಎಂಟು ತಂಡಗಳು ಟೂರ್ನಿಯ ಮೊದಲ ಸುತ್ತಿನಲ್ಲಿ ಸೆಣಸಲಿವೆ. ಒಮಾನ್‌ ಮತ್ತು ಯುಎಇ ಎರಡೂ ಕಡೆ ಅಕ್ಟೋಬರ್‌ 22ರ ವರೆಗೂ ಆರಂಭಿಕ ಸುತ್ತಿನ ಪಂದ್ಯಗಳು ನಡೆಯಲಿವೆ. ಎಂಟು ತಂಡಗಳ ಪೈಕಿ ನಾಲ್ಕು ತಂಡಗಳು ‘ಸೂಪರ್‌ 12’ ಸುತ್ತಿಗೆ ಅರ್ಹತೆ ಪಡೆಯುತ್ತವೆ, ಆ ತಂಡಗಳು ಈಗಾಗಲೇ ಅರ್ಹತೆ ಗಳಿಸಿರುವ 8 ತಂಡಗಳೊಂದಿಗೆ ಸೇರಲಿವೆ.

ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೆಣಸಲಿರುವ ಎಂಟು ತಂಡಗಳು: ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್‌, ನೆದರ್ಲೆಂಡ್‌, ಸ್ಕಾಟ್‌ಲೆಂಡ್‌, ನಮೀಬಿಯಾ, ಒಮಾನ್‌, ಪಪುವಾ ನ್ಯೂ ಗ್ಯುನಿಯಾ

ಸೂಪರ್‌ 12: ಗ್ರೂಪ್‌ 2

ಅ.26ರಂದು ಪಾಕಿಸ್ತಾನ-ನ್ಯೂಜಿಲೆಂಡ್‌, ಅ.25ಕ್ಕೆ ಅಫ್ಗಾನಿಸ್ತಾನವು, ಮೊದಲ ಸುತ್ತಿನ ‘ಗ್ರೂಪ್‌ ಬಿ’ ವಿಜೇತ ತಂಡದೊಂದಿಗೆ ಪಂದ್ಯ. ಅ.31ರಂದು ಭಾರತ-ಪಾಕಿಸ್ತಾನ, ಅ.31ರಂದು ಭಾರತ-ನ್ಯೂಜಿಲೆಂಡ್‌, ‘ಗ್ರೂಪ್‌ ಬಿ’ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡದೊಂದಿಗೆ ನವೆಂಬರ್‌ 5ರಂದು ಸೆಣಸಲಿದೆ. ನವೆಂಬರ್‌ 8ರಂದು ಭಾರತ ತಂಡವು ‘ಎ ಗುಂಪಿನಲ್ಲಿ’ ಜಯ ಸಾಧಿಸಿದ ತಂಡದೊಂದಿಗೆ ಕೊನೆಯ ಪಂದ್ಯ ಆಡಲಿದೆ.

× Chat with us